ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚಿತ್ರಣ ಹಳೆಯದು: ಯಾರಿಗೂ ತೊಂದರೆ ಆಗದಂತೆ ಬಸ್ಸುಗಳ ಕಾರ್ಯಾಚರಣೆ

03:34 PM Mar 01, 2024 IST | Samyukta Karnataka

ಬೆಂಗಳೂರು: ಇಂದು ರಾಮನಗರ ಘಟಕದಿಂದ 15 ವಾಹನಗಳನ್ನು ಮಾತ್ರ ಕುಣಿಗಲ್ ಸಮಾವೇಶಕ್ಕೆ ಆಚರಣೆ ಮಾಡಲಾಗಿದ್ದು, ರಾಮನಗರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಗ್ರಾಮಾಂತರ ಸಾರಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗಿರುತ್ತದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಬಸ್‌ಗಳ ಕೊರತೆ ಬಗ್ಗೆ ಯಾವುದೇ ದೂರುಗಳು ವಿದ್ಯಾರ್ಥಿಗಳಿಂದಾಗಲಿ ಅಥವಾ ಪ್ರಯಾಣಿಕರಿಂದಾಗಲಿ ಬಂದಿರುವುದಿಲ್ಲ. ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು ಹಾಜರಿದ್ದು ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್‌ಗಳ ವ್ಯವಸ್ಥೆ ಮಾಡಲಾಗಿರುತ್ತದೆ.

ಬಸ್ ನಿಲ್ದಾಣದಲ್ಲಿ ಸಾಮಾನ್ಯ ಟ್ರಾಫಿಕ್ ಇದ್ದು, ಪ್ರಯಾಣಿಕರಿಗೆ ಬಸ್‌ಗಳ ಕೊರತೆ ಆಗಿರುವುದಿಲ್ಲ.

ಬಸ್‌ಗಳನ್ನು ಕುಣಿಗಲ್ ಸಮಾವೇಶಕ್ಕೆ ಆಚರಣೆ ಮಾಡುವ ಬಗ್ಗೆ ಮಾಧ್ಯಮದವರು ವಿಭಾಗೀಯ ನಿಯಂತ್ರಣಾಧಿಕಾರಿ, ರಾಮನಗರ ವಿಭಾಗರವರಿಂದ ಮಾಹಿತಿ ಪಡೆದಿದ್ದು, ಸದರಿಯವರಿಗೆ ಸಹ ವಿದ್ಯಾರ್ಥಿಗಳಿಗೆ ಅಥವಾ ಪ್ರಯಾಣಿಕರಿಗೆ ತೊಂದರೆ ಆಗಿರುವುದಿಲ್ಲವೆಂಬುದಾಗಿ ಸ್ಪಷ್ಟವಾಗಿ ತಿಳಿಸಿದರು ತಪ್ಪು ಮಾಹಿತಿ ಪ್ರಕಟವಾಗಿದೆ. ಈ ಬಸ್ ನಿಲ್ದಾಣದ ಚಿತ್ರಣವು ಹಳೆಯದಾಗಿದ್ದೆ. ಇಂದಿನ ಬೆಳಗ್ಗೆ 9 ಗಂಟೆಯ ಬಸ್ ನಿಲ್ದಾಣದ ಚಿತ್ರವನ್ನು ಲಗತ್ತಿಸಿದೆ. ಈಗಾಗಲೇ ನನ್ನ ಆದೇಶದಂತೆ ಎಲ್ಲಾ ವಿಭಾಗಗಳಿಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ಸುಗಳ‌ ಕಾರ್ಯಾಚರಣೆ ಮಾಡಲು ಆದೇಶಿಸಲಾಗಿದೆ ಎಂದಿದ್ದಾರೆ.

Next Article