ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜನರೇ ಅಭಿಪ್ರಾಯಿಸುವ ಪ್ರಣಾಳಿಕೆ ರೂಪಿತವಾಗಬೇಕು

12:54 PM Mar 03, 2024 IST | Samyukta Karnataka

ಬೆಂಗಳೂರು: ಬಿಜೆಪಿ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು "ವಿಕಸಿತ ಭಾರತ ಸಂಕಲ್ಪ ಪತ್ರ" ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ತಮ್ಮ ಅಮೂಲ್ಯ ಅಭಿಪ್ರಾಯ ಸಲ್ಲಿಸಿದರು ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಬಿಜೆಪಿ ಸಂಕಲ್ಪ ಪತ್ರಕ್ಕಾಗಿ 1 ಕೋಟಿಗೂ ಹೆಚ್ಚು ಜನರಿಂದ ಸಲಹೆಗಳ ಸಂಗ್ರಹದ ಮಹಾ ಅಭಿಯಾನ ಆರಂಭವಾಗಿದ್ದು ಸ್ವಾತಂತ್ರ್ಯಾ ನಂತರ ಭಾರತದ ಇತಿಹಾಸದಲ್ಲಿ ರಾಜಕೀಯ ಪಕ್ಷಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪ್ರಣಾಳಿಕೆಗಳನ್ನು ತಯಾರಿಸುತ್ತಿದ್ದವು, ಆದರೆ ನಮ್ಮ 'ಪ್ರಣಾಳಿಕೆ ಜನರಿಗಾಗಿ, ದೇಶಕ್ಕಾಗಿ, ಜನರೇ ಅಭಿಪ್ರಾಯಿಸುವ ಪ್ರಣಾಳಿಕೆ ರೂಪಿತವಾಗಬೇಕು' ಎನ್ನುವುದು ಮೋದಿಜೀ ಅವರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯು "ಸಂಕಲ್ಪ ಪತ್ರ" ಅಭಿಯಾನವನ್ನು ಆರಂಭಿಸಿದೆ.

ಸಮಾಜದ ಕಟ್ಟಕಡೆಯ ಪ್ರಜೆಗಳಿಂದಿಡಿದು ವಿವಿಧ ಕ್ಷೇತ್ರಗಳ ಎಲ್ಲ ಪ್ರಮುಖರು, ಪರಿಣಿತರು, ವಿಶೇಷವಾಗಿ ಕೂಲಿ ಕಾರ್ಮಿಕರಿಂದ ಹಿಡಿದು, ರೈತರು,ಯುವಕರು, ವಿವಿಧ ಸಮುದಾಯಗಳ ಶ್ರಮ ಜೀವಿಗಳು, ಉದ್ಯಮಿಗಳು, ಕ್ರೀಡಾ ಪಟುಗಳು, ನಿವೃತ್ತ ಸೈನಿಕರು, ಸರ್ಕಾರಿ ನೌಕರರು, ಸಾಂಸ್ಕೃತಿಕ ವಲಯದ ಸಂಘಟಕರು ಭಾಗವಹಿಸಿ ಉತ್ತಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಸೂಚಿಸುವಂತೆ ವಿನಂತಿಸಲಾಯಿತು ಎಂದಿದ್ದಾರೆ.

Next Article