For the best experience, open
https://m.samyuktakarnataka.in
on your mobile browser.

ತೆರಿಗೆ ಹಂಚಿಕೆ: ರಾಜ್ಯಕ್ಕೆ ೧.೮೭ಲಕ್ಷ ಕೋಟಿ ಕೊಕ್ಕೆ

11:21 PM Feb 05, 2024 IST | Samyukta Karnataka
ತೆರಿಗೆ ಹಂಚಿಕೆ  ರಾಜ್ಯಕ್ಕೆ ೧ ೮೭ಲಕ್ಷ ಕೋಟಿ ಕೊಕ್ಕೆ

ಬೆಂಗಳೂರು: ೧೪ನೇ ಮತ್ತು೧೫ನೇ ಹಣಕಾಸು ಆಯೋಗದ ಅವಧಿಯಲ್ಲಿ ತೆರಿಗೆ ಹಂಚಿಕೆ ಅನ್ಯಾಯದಿಂದ ರಾಜ್ಯಕ್ಕೆ ಒಟ್ಟಾರೆ ೧,೮೭,೮೬೭ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಪಾದಿಸಿದರು.
ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಆಗಿರುವ ಅನುದಾನ ಅನ್ಯಾಯದ ವಿರುದ್ಧ ಫೆ.೭ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಇದು ಬಿಜೆಪಿ ವಿರುದ್ಧದ ರಾಜಕೀಯ ಪ್ರತಿಭಟನೆ ಅಲ್ಲ. ಕೇಂದ್ರದ ಮಲತಾಯಿ ಧೋರಣೆ, ತಾರತಮ್ಯ ವಿರುದ್ಧ ಮಾತ್ರ. ರಾಜ್ಯದ ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಭಾಗವಹಿಸುತ್ತಿದ್ದಾರೆ. ಬಿಜೆಪಿಯವರನ್ನೂ ಆಹ್ವಾನಿಸುತ್ತಿದ್ದೇವೆ ಎಂದರು.
ಒಕ್ಕೂಟ ವ್ಯವಸ್ಥೆಗೆ ಅರ್ಥವಿಲ್ಲ: ಭದ್ರಾ ಮೇಲ್ದಂಡೆಗೆ ೫,೩೦೦ ಕೋಟಿ ಕೊಡುತ್ತೇವೆ ಎಂದು ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಈವರೆಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಮಹದಾಯಿ ಯೋಜನೆಗೆ ಅಧಿಸೂಚನೆ ಆದರೂ ಪರಿಸರ ಇಲಾಖೆ ಅನುಮತಿ ಕೊಟ್ಟಿಲ್ಲ. ಮೇಕೆದಾಟು ಯೋಜನೆಗೆ ಇಂದಿನವರೆಗೆ ಅನುಮತಿ ಕೊಟ್ಟಿಲ್ಲ. ರಾಜ್ಯದಲ್ಲಿ ೨೨೩ ತಾಲೂಕುಗಳಲ್ಲಿ ಬರ ಇದೆ. ೪ ತಿಂಗಳಿAದ ಮನವಿ ಮಾತ್ರದ್ದರೂ ನಯಾಪೈಸೆ ಸಿಕ್ಕಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ಲಕ್ಷಣವಾ? ಈ ಅನ್ಯಾಯ ಸರಿಪಡಿಸಲು ಆಗ್ರಹಿಸಿಯೇ ಪ್ರತಿಭಟನೆ ನಡೆಯಲಿದೆ.