For the best experience, open
https://m.samyuktakarnataka.in
on your mobile browser.

ದಾಖಲೆ ಇಲ್ಲದ 38.50 ಲಕ್ಷ ಚಿನ್ನಾಭರಣ ಜಪ್ತಿ

04:13 PM Mar 22, 2024 IST | Samyukta Karnataka
ದಾಖಲೆ ಇಲ್ಲದ 38 50 ಲಕ್ಷ ಚಿನ್ನಾಭರಣ ಜಪ್ತಿ
ಸಾಂದರ್ಭಿಕ ಚಿತ್ರ

ಧಾರವಾಡ: ದಾಖಲೆ ಇಲ್ಲದೇ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಸಾಗಿಸುತ್ತಿದ್ದ ೩೮.೫೦ ಲಕ್ಷ್ಯ ಮೌಲ್ಯದ ಚಿನ್ನಾಭರಣಗಳನ್ನು ಇಲ್ಲಿಯ ತೇಗೂರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಕೆ.ಎಸ್.ಆರ್.ಟಿ.ಸಿಯ ನಿಪ್ಪಾಣಿ –ಗಂಗಾವತಿ ಬಸ್‍ದಲ್ಲಿ ಸರಿಯಾದ ದಾಖಲೆ ಇಲ್ಲದ 38,50,000 ಮೊತ್ತದ ಬಂಗಾರದ ಆಭರಣಗಳು ಪತ್ತೆಯಾಗಿದ್ದು, ವಸ್ತು ವಶ ಪಡಿಸಿಕೊಂಡು ಎಫ್‍ಐಆರ್ ದಾಖಲಿಸಲಾಗಿದೆ.
ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ (47) ಹುಕುಮಜಿ ಮಾಲಿ ಇವರು ಒಟ್ಟು 778 ಗ್ರಾಂ ತೂಕದ ಬೋರಮಾಳ ಸರ, ಗುಂಡುಗಳು, ಲಾಕೇಟ ಇರುವ ಬಂಗಾರದ ಆಭರಣಗಳನ್ನು ಕೊಲ್ಲಾಪುರದಿಂದ ಸಿಂದನೂರಿಗೆ ಸಾಗಿಸುತ್ತಿದ್ದರು. ಆದರೆ ತಪಾಸಣೆ ವೇಳೆಯಲ್ಲಿ ಸರಿಯಾದ ದಾಖಲೆ ನೀಡದ ಹಿನ್ನೆಲೆಯಲ್ಲಿ ಎಲ್ಲ ಆಭರಣಗಳನ್ನು ಜಪ್ತಿ ಮಾಡಲಾಗಿದೆ.