ನಮ್ಮ ಕಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ
03:14 PM Apr 29, 2024 IST | Samyukta Karnataka
ಬೆಂಗಳೂರು: ನನ್ನ ಹಾಗೂ ಕಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಎಚ್.ಡಿ.ರೇವಣ್ಣ ಹಾಗೂ ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆಲ್ಲ ಹೆದರಿ ನಾನು ಎಲ್ಲಿ ಓಡಿ ಹೋಗುವುದಿಲ್ಲ.ಎ ಫ್‌ಐಆರ್ ಹಾಕುತ್ತಾರೆ ಅನ್ನೋದು ಅವನಿಗೆ ಗೊತ್ತಿರಲಿಲ್ಲ. ಪ್ರಜ್ವಲ್ ರೇವಣ್ಣ ಅವರ ವಿದೇಶ ಪ್ರಯಾಣ ಎಫ್‌ಐಆರ್ ಆಗುವ ಮೊದಲೇ ನಿರ್ಧಾರವಾಗಿತ್ತು ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ನಾನು ಏನು ಹೇಳುವುದಿಲ್ಲ. ಎಸ್‌ಐಟಿಯಿಂದ ತನಿಖೆ ಆಗಲಿ ಎಂದರು.