ನಾಮಪತ್ರ ಸಲ್ಲಿಸಲು ಚಕ್ಕಡಿ ಏರಿ ಹೊರಟ ಮುತ್ತಣ್ಣವರ
ಕಳಸಾ ಬಂಡೂರಿ ಯೋಜನೆಯ ಜಾಗೃತಿಗೋಸ್ಕರ 20 ಕೀಲೋ ಮೀಟರವರೆಗೂ ಎತ್ತಿನ ಚಕ್ಕಡಿಯನ್ನು ಏರಿ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಮುತ್ತಣ್ಣವರ ಅವರು ನಾಮಪತ್ರ ಸಲ್ಲಿಸಲು ಧಾರವಾಡಕ್ಕೆ ತೆರಳಿದರು.
ಹುಬ್ಬಳ್ಳಿ : ಹುಬ್ಬಳ್ಳಿಯಿಂದ ದಾರವಾಡದವರೆಗೆ ಕಳಸಾ ಬಂಡೂರಿ ಯೋಜನೆಯ ಜಾಗೃತಿಗೋಸ್ಕರ 20 ಕೀಲೋ ಮೀಟರ ವರೆಗೂ ಎತ್ತಿನ ಚಕ್ಕಡಿಯನ್ನು ಏರಿ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಮುತ್ತಣ್ಣವರ ಅವರು ನಾಮಪತ್ರ ಸಲ್ಲಿಸಲು ಧಾರವಾಡಕ್ಕೆ ತೆರಳಿದರು. ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿ ಸೇರಿ ವಿವಿಧ ಮಹಾನ್ ನಾಯಕರಿಗೆ ಮಾಲಾರ್ಪಣೆ ಮಾಡಿ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಧಾರವಾಡಕ್ಕೆ ತೆರಳಿದರು.
ಶಿವಾಜಿ ಚೌಕ ದಿಂದ ಮೆರವಣಿಗೆ ಮೂಲಕ ಅಪಾರ ಅಭಿಮಾನಿಗಳೊಂದಿಗೆ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ವಿವಿಧ ಮಹಿಳಾ ಸಂಘಟನೆಗಳು ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ನೂರಾರು ಡೊಳ್ಳು ಕುಣಿತದ ಜಾನಪದ ಕಲಾವಿದರ ತಂಡಗಳು, ಝಾಂಜ ಮೇಳ, ಕುದುರೆ ಕುಣಿತ, ಜಾನಪದ ಬೊಂಬೆ ಕುಣಿತ,ದಾಲಪಟಾ ಕಲಾವಿದರ ಕತ್ತಿ ವರಸೆ, ಜಗ್ಗಲಗಿ ಹಿಗೆ ಕನ್ನಡ ನಾಡು ನುಡಿಯ ಸಾಂಸ್ಕೃತಿಕವನ್ನು ಎತ್ತಿಹಿಡಿಯವ ಕಲಾವಿದರು ಭಾಗವಹಿಸಲಿದ್ದಾರೆ.