For the best experience, open
https://m.samyuktakarnataka.in
on your mobile browser.

ಪತಿಯನ್ನು ಅನ್‌ಫಾಲೋ ಮಾಡಿದ ನಯನತಾರಾ

11:24 PM Mar 02, 2024 IST | Samyukta Karnataka
ಪತಿಯನ್ನು ಅನ್‌ಫಾಲೋ ಮಾಡಿದ ನಯನತಾರಾ

ಚೆನ್ನೈ: ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ದಾಂಪತ್ಯದಲ್ಲಿ ಬಿಡುಕು ಮೂಡಿದೆಯಾ..? ಹೀಗೊಂದು ಸಂದೇಹ ಬರಲು ಕಾರಣ ನಯನತಾರಾ ಪೋಸ್ಟ್. ಹೌದು. ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ವಿಘ್ನೇಶ್ ಶಿವನ್‌ರನ್ನು ಅನ್‌ಫಾಲೋ ಮಾಡುವ ಮೂಲಕ ವದಂತಿಗೆ ಇಂಬು ನೀಡಿದ್ದಾರೆ.
ಇದರ ಬೆನ್ನಲ್ಲೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದೂರಾಗುತ್ತಾರೆ. ಡೈವೋರ್ಸ್ ಪಡೆಯುತ್ತಾರೆ ಅಂತೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಯನತಾರಾ ಒಂದು ಇಂಗ್ಲಿಷ್ ಪೋಸ್ಟ್ ಮಾಡಿದ್ದರು. `ಅವಳು ಕಣ್ಣೀರಿನ ಮೂಲಕವೂ ಇದು ಆಕೆ ಸಿಕ್ಕಿದೆ ಎಂದು ಯಾವಾಗಲೂ ಹೇಳುತ್ತಿದ್ದಳು’ ಎನ್ನುವ ಅರ್ಥದಲ್ಲಿ ಒಂದು ಕೋಟ್ ಹಾಕಿದ್ದರು. ಜೊತೆಗೆ ಇನ್ಸ್ಟಾಗ್ರಾಮ್‌ನಲ್ಲಿ ಪತಿ ವಿಘ್ನೇಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಹಾಗಾಗಿ ಸಂಸಾರದಲ್ಲಿ ಬಿರುಕು ಮೂಡಿದೆಯಾ… ನಯನ್ ಪೋಸ್ಟ್ ಅರ್ಥವೇನು? ಆಕೆ ಪತಿಯನ್ನು ಅನ್‌ಫಾಲೋ ಮಾಡಲು ಕಾರಣ ಏನು ಎನ್ನುವ ಚರ್ಚೆ ಆರಂಭವಾಗಿದೆ.
ಇತ್ತೀಚೆಗೆ ಸೆಲೆಬ್ರಿಟಿಗಳು ಡೈವೋರ್ಸ್ ಪಡೆದು ಬೇರ್ಪಡುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡುತ್ತಿದ್ದಾರೆ. ಇಬ್ಬರ ಜೊತೆಗಿನ ಫೋಟೊಗಳನ್ನು ಡಿಲೀಟ್ ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ತಮ್ಮ ಡೈವೋರ್ಸ್ ಬಗ್ಗೆ ಸುಳಿವು ಕೊಡುತ್ತಿದ್ದಾರೆ. ಕೊನೆಗೆ ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ದೂರಾಗುತ್ತಿದ್ದಾರೆ. ನಯನ್ ತಮ್ಮ ಪತಿಯನ್ನು ಅನ್ ಫಾಲೋ ಮಾಡಿದ್ದರೆ, ವಿಘ್ನೇಶ್ ಫಾಲೋ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಗಳು ಇನ್ನು ಇವೆ. ಇವರಿಬ್ಬರು ಬೇರ್ಪಟ್ಟಿದ್ದಾರೆಯೇ? ಆಕಸ್ಮಿಕವಾಗಿ ನಯನ್ ಅನ್‌ಫಾಲೋ ಮಾಡಿದ್ದಾರಾ? ತಾಂತ್ರಿಕ ಸಮಸ್ಯೆಯಿಂದ ಹೀಗಾಯ್ತಾ… ಎಂದೂ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.