ಬಸವನಾಡಿನ ಕೀರ್ತಿ ದೇಶದಗಲ
ಬೆಂಗಳೂರು: ಬಸವನಾಡಿನ ಕೀರ್ತಿಯನ್ನು ದೇಶದಗಲ ಬೆಳಗಿದ ಈ ಪ್ರತಿಭಾವಂತರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಚಿವ ಎಂ ಬಿ ಪಾಟೀಲ ಶುಭ ಹಾರೈಸಿದ್ದಾರೆ.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗಳ ತೇರ್ಗಡೆಗೊಂಡ ಪ್ರತಿಭಾವಂತರಿಗೆ ಸಾಮಾಜಿಕ ಜಾಲತಾಣ ಮೂಲಕ ಶುಭ ಹಾರೈಸಿ ಪೋಸ್ಟ್ ಮಾಡಿದ್ದು 2024ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆ (UPSC)ಗಳಲ್ಲಿ ತೇರ್ಗಡೆಯಾದ ಕರ್ನಾಟಕದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು. ದೇಶದ ಪ್ರತಿಷ್ಠಿತ ಹಾಗೂ ಕ್ಲಿಷ್ಟಕರ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ನಮ್ಮ ವಿಜಯಪುರ ಮೂಲದ ವಿಜೇತ ಭೀಮಸೇನ ಹೊಸಮನಿ ಅವರು 100ನೇ ಹಾಗೂ 101ನೇ ರ್ಯಾಂಕ್ ಗಳಿಸಿರುವ ದಾವಣಗೆರೆಯ BSc ಕೃಷಿ ಪದವೀಧರೆ ಸೌಭಾಗ್ಯ ಬೀಳಗಿ ಮಠ ಅವರು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ, ಕನ್ನಡದಲ್ಲಿ UPSC ಪರೀಕ್ಷೆಗಳನ್ನು ಎದುರಿಸಿ ಬೆಂಗಳೂರಿನಲ್ಲಿ ಸಬ್ಸ್ಕ್ರಿಪ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಶಾಂತಪ್ಪ ಹಾಗೂ ಸಂತೋಷ ಶ್ರೀಕಾಂತ ಶಿರಡೋಣಾ ಅವರು 641ನೇ ರ್ಯಾಂಕ್ ಜೊತೆ ತೇರ್ಗಡೆಗೊಂಡಿದ್ದಾರೆ. ಬಸವನಾಡಿನ ಕೀರ್ತಿಯನ್ನು ದೇಶದಗಲ ಬೆಳಗಿದ ಈ ಪ್ರತಿಭಾವಂತರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು ನಿಮ್ಮ ಸಾಧನೆ ಎಲ್ಲರಿಗೂ ಸ್ಪೂರ್ತಿಯುತವಾಗಿದೆ ಎಂದಿದ್ದಾರೆ.