ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಾಲರಾಮನಿಗೆ ಮುತ್ತಿಕ್ಕಲಿರುವ ಸೂರ್ಯರಶ್ಮಿ

12:30 AM Apr 17, 2024 IST | Samyukta Karnataka

ರಾಮನವಮಿ ಸಂಭ್ರಮದಿಂದ ಆಚರಿಸಲು ಇಡೀ ದೇಶವೇ ಸಂಭ್ರಮದಿಂದ ಸಜ್ಜಾಗಿದೆ. ಆದರೆ ಆಯೋಧ್ಯೆಯ ಮಂದಿರದಲ್ಲಿ ವಿಶಿಷ್ಠವಾದ ಘಟನೆಗೆ ಅಲ್ಲಿನ ಜನ ಕಾದಿದ್ದಾರೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಅಲ್ಲಿಗೆ ತಲುಪಿದ್ದಾರೆ. ಮಧ್ಯಾಹ್ನದ ೧೨.೧೬ರ ಹೊತ್ತಿಗೆ ಈ ಘಟನೆ ಜರುಗಲಿದ್ದು, ಸುಮಾರು ೫ ನಿಮಿಷಗಳ ಕಾಲ ಸೂರ್ಯರಶ್ಮಿ ರಾಮನ ಹಣೆಯ ಮೇಲೆ ಬೀಳಲಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಖಭೌತ ವಿಜ್ಞಾನಿಗಳು ಇದಕ್ಕಾಗಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ.
ಇಂಥದ್ದೊಂದು ಘಟನೆಗೆ ವೇದಿಕೆಯನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟೋಫಿಸಿಕ್ಸ್ ಸಂಸ್ಥೆಯು ಖಾಸಗಿ ಸಂಸ್ಥೆ ಆಪ್ಟಿಕ್ಟಸ್ ಅಂಡ್ ಅಲೈಡ್ ಇಂಜಿನಿಯರಿಂಗ್ ಮೂಲಕ ಇದನ್ನು ಸಿದ್ಧಪಡಿಸಿದೆ. ರೂರ್ಕಿಯ ಸೆಂಟ್ರಲ್ ಬ್ಯುಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಸಿಬಿಆರ್‌ಐ) ವಿಜ್ಞಾನಿಗಳ ಪಾತ್ರವೂ ಇದೆ. ಕೃಷ್ಣ ಶಿಲೆಯಲ್ಲಿ ಅರಳಿರುವ ರಾಮನ ಮೂರ್ತಿಯ ಮೇಲೆ ೫೮ ಮಿಲಿಮೀಟರ್ ಗಾತ್ರದ ಬೆಳಕಿನ ತಿಲಕ ಮೂಡಲಿದೆ.
ಮೂರು ಕನ್ನಡಿಗಳ ಸಹಾಯದಿಂದ ಈ ಪ್ರಕ್ರಿಯೆ ನಡೆಯಲಿದ್ದು, ಇದನ್ನು ದೂರದರ್ಶನ ನೇರ ಪ್ರಸಾರ ಮಾಡಲಿದೆ. ಈ ಸೂರ್ಯ ಅಭಿಷೇಕ' ಅಥವಾಸೂರ್ಯ ತಿಲಕ'ದ ದೃಶ್ಯವನ್ನು ದೇಶಾದ್ಯಂತ ಅದನ್ನು ಭಕ್ತರು ಕಣ್ಣುತುಂಬಿಕೊಳ್ಳಬಹುದಾಗಿದೆ. ಶ್ರೀರಾಮ ಸೂರ್ಯವಂಶಕ್ಕೆ ಸೇರಿದವನೆನ್ನುವುದು ಹಿಂದುಗಳ ನಂಬಿಕೆ ಈ ಹಿನ್ನೆಲೆಯಲ್ಲಿ ಸೂರ್ಯ ಅಭಿಷೇಕಕ್ಕೆ ಮಹತ್ವ ದೊರೆತಿದೆ. ಈ ಸಂದರ್ಭದಲ್ಲಿ ಆಗುವ ಜನಸಂದಣಿಯನ್ನು ನಿಯಂತ್ರಿಸಲು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ನೆರವನ್ನು ಪಡೆಯಲಾಗಿದೆ. ಫೆಬ್ರವರಿ ೧೬ರಂದು ಅಲ್ಲಿಗೆ ಭೇಟಿ ನೀಡಿದ್ದ ತಿರುಪತಿ ತಂಡ, ಸರತಿ ಸಾಲು, ನೀರಿನ ಘಟಕ, ಪ್ರವೇಶ ಮತ್ತು ನಿರ್ಗಮನದ ದ್ವಾರಗಳ ಕುರಿತು ಸಲಹೆಗಳು ನೀಡಿದೆ.

ಸೂರ್ಯಾಭಿಷೇಕ
ಸಮಯ: ಮಧ್ಯಾಹ್ನ ೧೨.೧೬ರಿಂದ ೫ ನಿಮಿಷ
ದೂರದರ್ಶನದಲ್ಲಿ ನೇರ ಪ್ರಸಾರ ಆಗಲಿದೆ
೫೬ ವಿಧಧ ಭಕ್ಷ್ಯಭೋಜ್ಯ
ರಾಮನಿಗೆ ನೈವೇದ್ಯಕ್ಕಾಗಿ ೫೬ ವಿವಿಧ ಭಕ್ಷ ಭೋಜ್ಯಗಳಗಳನ್ನು ತಯಾರಿಸಲಾಗುವುದು ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಹೇಳಿದ್ದಾರೆ.
೧,೧೧,೧೧೧ ಕೆಜಿ ಲಡ್ಡೂ ಪ್ರಸಾದ
ಈ ಘಟನೆಯನ್ನು ಅದ್ಧೂರಿಯಾಗಿ ಆಚರಿಸಲು ದೇವಸ್ಥಾನ ಟ್ರಸ್ಟ್ ನಿರ್ಧರಿಸಿದ್ದು, ೧ ಲಕ್ಷ ೧೧ ಸಾವಿರದ ೧೧೧ ಕೆಜಿ ಲಾಡೂವನ್ನು ಪ್ರಸಾದವಾಗಿ ಹಂಚಲು ತಯಾರಿ ಮಾಡಿಕೊಂಡಿದ್ದಾರೆ.

ಏನಿದು ಸೂರ್ಯ ತಿಲಕ?
ಆಪ್ಟೋ ಮೆಕ್ಯಾನಿಕಲ್ ಸಿಸ್ಟಂ ವ್ಯವಸ್ಥೆಯಿಂದ `ಸೂರ್ಯ ತಿಲಕ' ನಡೆಯಲಿದ್ದು, ಮೂರೂವರೆ ನಿಮಿಷಗಳ ಕಾಲ ಬಾಲರಾಮನ ಹಣೆ ಮೇಲೆ ಕೇಂದ್ರೀಕೃತ ಸೂರ್ಯಕಿರಣ ಬೀಳಲಿದೆ.
ಒಟ್ಟು ನಾಲ್ಕು ಕನ್ನಡಿ ಮತ್ತು ಮಸೂರಗಳನ್ನು ಹಿತ್ತಾಳೆ ಪೈಪ್‌ನಲ್ಲಿ ಅಳವಡಿಸಲಾಗುತ್ತದೆ. ಪೈಪ್‌ನ ಒಳಭಾಗ ಮತ್ತು ಕಪ್ಪು ಪುಡಿಯನ್ನು ಬಳಿದು, ಬೆಳಕು ಹರಡುವುದನ್ನು ತಡೆಯಲಾಗುತ್ತದೆ.
ದಕ್ಷಿಣ ದಿಕ್ಕಿನಿಂದ ಬರುವ ಕಿರಣಗಳನ್ನು ಉತ್ತರ ದಿಕ್ಕಿಗೆ ಪ್ರತಿಫಲಿಸಿ, ಅದು ಗರ್ಭಗುಡಿಯ ಒಳಗೆ ಹೋಗುವ ಹಾಗೆ ವಿನ್ಯಾಸಗೊಳಿಸಲಾಗಿದೆ.
ಪೂರ್ವ ದಿಕ್ಕಿಗೆ ಮುಖ ಮಾಡಿರುವ ಬಾಲರಾಮನ ಹಣೆಯ ಮೇಲೆ ಸೂರ್ಯ ಕಿರಣ ಬೀಳುತ್ತದೆ. ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣವನ್ನು ಇಲ್ಲಿ ಬಳಸಿಲ್ಲ. ಪ್ರತಿವರ್ಷ ರಾಮನವಮಿಯಂದು ಸೂರ್ಯ ತಿಲಕ್ ಸರಿಯಾಗಿ ನಡೆಯುವಂತೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗುತ್ತದೆ.

Next Article