ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿ ಅಧ್ಯಕ್ಷರಿಗೆ ಕಾನೂನಿನ ಅರಿವಿಲ್ಲ

11:00 PM Feb 22, 2024 IST | Samyukta Karnataka

ವಿಧಾನಸಭೆ: ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೇ ಹೆಚ್ಚಿನ ಆದಾಯ ಬಂದ ದೇವಸ್ಥಾನಗಳಲ್ಲಿ ಹಣ ತೆಗೆದುಕೊಳ್ಳಲಾಗ್ತಿತ್ತು, ಈ ಕಾನೂನನ್ನು ಅವರೇ ಅನುಷ್ಠಾನ ಮಾಡಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಾನೂನಿನ ಅರಿವಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿಗಳ ಕಾಯ್ದೆ ತಿದ್ದುಪಡಿ ವಿಚಾರವಾಗಿ ಹೇಳಿಕೆ ನೀಡಿದ ಅವರು, ಈ ಕಾಯ್ದೆಯಲ್ಲಿ ಸಣ್ಣ ಬದಲಾವಣೆ ಅಷ್ಟೇ ಮಾಡಿದ್ದೇವೆ, ೧೦ ಲಕ್ಷದ ಒಳಗಡೆ ಆದಾಯ ಇರುವ ದೇವಸ್ಥಾನಗಳು ಯಾವುದೇ ರೀತಿಯ ಹಣ ಕೊಡುವಂತಿಲ್ಲ, ೧೦ ಲಕ್ಷದಿಂದ ೧ ಕೋಟಿ ಆದಾಯ ಇರುವ ದೇವಸ್ಥಾನಗಳು ಶೇ.೫ ರಷ್ಟು ಹಾಗೂ ೧ ಕೋಟಿ ಮೇಲೆ ಆದಾಯವಿರುವ ದೇವಸ್ಥಾನಗಳು ಶೇ.೧೦ ರಷ್ಟು ಹಣವನ್ನು ಸರ್ಕಾರಕ್ಕೆ ಕೊಡಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದರು.

Next Article