For the best experience, open
https://m.samyuktakarnataka.in
on your mobile browser.

‘ಭಾರತ ರತ್ನ’ ಪ್ರದಾನ

12:19 PM Mar 30, 2024 IST | Samyukta Karnataka
‘ಭಾರತ ರತ್ನ’ ಪ್ರದಾನ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಕೃಷಿ, ಆಡಳಿತ, ಸಮಾಜಸೇವೆ ಸೇರಿ ಹಲವು ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಮಹನೀಯರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ನೀಡಿ ಗೌರವಿಸಿದ್ದಾರೆ.
ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪಿ.ವಿ.ನರಸಿಂಹ ರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಇಂದು (ಶನಿವಾರ) ಭಾರತ ರತ್ನ ಪ್ರದಾನ ಮಾಡಲಾಯಿತು.
ಪಿ.ವಿ. ನರಸಿಂಹರಾವ್‌ ಅವರ ಪುತ್ರ ಪಿ.ವಿ. ಪ್ರಭಾಕರ್‌ ರಾವ್‌, ಎಂ.ಎಸ್.ಸ್ವಾಮಿನಾಥನ್‌ ಅವರ ಪುತ್ರಿ ನಿತ್ಯಾ ರಾವ್‌, ಚೌಧರಿ ಚರಣ್‌ ಸಿಂಗ್‌ ಅವರ ಮೊಮ್ಮಗ ಜಯಂತ್‌ ಸಿಂಗ್‌, ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಅವರು ಪ್ರಶಸ್ತಿ ಸ್ವೀಕರಿಸಿದರು.