`ಮಹಾ' ವಿರುದ್ಧವೇ ಎಂಇಎಸ್ ಗುಡುಗು
ಬೆಳಗಾವಿ: ಬೆರಳೆಣಿಕೆಯಷ್ಟಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯವರು `ಮಹಾ' ನೆಲದಲ್ಲಿಯೇ ಪ್ರತಿಭಟನೆ ನಡೆಸಿ ಕೆಲ ಸಮಯ ಹೈಡ್ರಾಮಾ ನಡೆಸಿದರು.
ಅಧಿವೇಶನಕ್ಕೆ ರ‍್ಯಾಯವಾಗಿ ಮಹಾಮೇಳಾವ್ ನಡೆಸಲು ಬೆಳಗಾವಿ ಪೊಲೀಸರು ಅವಕಾಶ ಕೊಡಲಿಲ್ಲ. ಹೀಗಾಗಿ ಮಹಾರಾಷ್ಟçದ ಶಿನ್ನೊಳ್ಳಿಯಲ್ಲಿ ರಸ್ತೆ ತಡೆಸಿ ನಡೆಸಿದರು. ಇಷ್ಟು ದಿನ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದ ನಾಡದ್ರೋಹಿಗಳು ಈಗ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ತಮ್ಮ ಆಕ್ರೋಶ ಹೊರಹಾಕಿದರು.
ಶಿನ್ನೊಳ್ಳಿಯಲ್ಲಿ ನಡೆದ ರಸ್ತೆ ತಡೆಯಲ್ಲಿ ಬೆಳಗಾವಿಯಿಂದ ೧೧ ಜನ ಕೋರ್ ಕಮಿಟಿಯವರನ್ನು ಬಿಟ್ಟರೆ ಬೆರಳೆಣಿಕೆಯಷ್ಟು ಜನ ಭಾಗವಹಿಸಿದ್ದರು. ಇನ್ನುಳಿದಂತೆ ಸ್ಥಳೀಕರು ಎಂಇಎಸ್ ಪ್ರತಿಭಟನೆಗೆ ಕವಡೆಕಾಸಿನ ಕಿಮ್ಮತ್ತೂ ಸಹ ನೀಡಲಿಲ್ಲ. ಎಲ್ಲವೂ ಯಥಾವತ್ತಾಗಿ ನಡೆದಿತ್ತು.
ಬೆಳಗಾವಿ ಪೊಲೀಸರು ತಮ್ಮ ಗಡಿಯೊಳಗೆ ಎಂಇಎಸ್‌ವರಿಗೆ ಪ್ರತಿಭಟನೆ ಕೂಡಲೂ ಸಹ ಅವಕಾಶ ಕೊಡಲಿಲ್ಲ. ಹೀಗಾಗಿ ಮಹಾರಾಷ್ಟ್ರ ಹದ್ದಿನೊಳಗೆ ಕುಳಿತು ಅಬ್ಬರದ ಭಾಷಣ ಮಾಡಿದರು. ಭಾಷಣ ಮುಗಿದ ನಂತರ ಕೆಲವರು ಕರ್ನಾಟಕ ಗಡಿಯೊಳಗೆ ನುಗ್ಗುವ ಯತ್ನ ನಡೆಸಿ ಮತ್ತೇ ಹೈಡ್ರಾಮಾ ನಡೆಸಿದರು. ಆಗ ಅವರನ್ನು ಮಹಾ ಪೊಲೀಸರೇ ತಡೆದರು.
ಇನ್ನು ಕರ್ನಾಟಕದ ಗಡಿಯೊಳಗೆ ಬೆಳಗಾವಿ ಪೊಲೀಸರು ಸಾಲಾಗಿ ನಿಂತಿದ್ದರು, ಹೀಗಾಗಿ ಅವರನ್ನು ತಡೆಯುವ ದುಸ್ಸಾಹಸಕ್ಕೆ ಎಂಇಎಸ್‌ನವರು ಕೈ ಹಾಕಲಿಲ್ಲ.