For the best experience, open
https://m.samyuktakarnataka.in
on your mobile browser.

ಮೋದಿ ಮಾತು ಪ್ರಧಾನಿ ಘನತೆಗೆ ತಕ್ಕುದಲ್ಲ

11:18 PM May 30, 2024 IST | Samyukta Karnataka
ಮೋದಿ ಮಾತು ಪ್ರಧಾನಿ ಘನತೆಗೆ ತಕ್ಕುದಲ್ಲ

ನವದೆಹಲಿ: ಮೋದಿ ಚುನಾವಣೆ ಪ್ರಚಾರ ಭಾಷಣ ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದಾಗಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಪಂಜಾಬ್ ಜನರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.
ದೇಶದ ವಿಭಜನೆಗೆ ಇಂಬು ಕೊಡುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಅವರ ಮಾತುಗಳಲ್ಲಿ ಕೆಲವು ಅಸಂಸದೀಯ ಪದಗಳೂ ಸೇರಿವೆ. ಒಂದು ಸಮುದಾಯವನ್ನು ದೂರವಿಟ್ಟು ಮತ್ತೊಂದು ಸಮುದಾಯದ ಏಕೈಕ ವಾರಸುದಾರರರಂತೆ ಬಿಜೆಪಿ ವರ್ತಿಸುತ್ತಿದೆ. ದ್ವೇಷ ಭಾಷಣ ಮಾಡಿದ್ದಾರೆ. ಕೆಲವು ವಿಷಯಗಳಲ್ಲಿ ನನ್ನ ಹೆಸರಿಗೆ ಜೋಡಿಸಲಾಗಿದೆ. ನಾನು ಎಂದೂ ಯಾವುದೇ ಒಂದು ಸಮುದಾಯವನ್ನು ದೂರವಿಡಲಿಲ್ಲ. ಈ ಹಿಂದೆ ಮೋದಿ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಆದರೆ ಈಗ ರೈತರ ಉಳಿತಾಯವೇ ಕರಗಿಹೋಗಿದೆ. ರೈತರ ದಿನ ಆದಾಯ ಕೇವಲ ೨೭ ರೂ. ರೈತರ ಮೇಲೆ ತಲಾವಾರು ಇರುವ ಸಾಲ ೨೭ ಸಾವಿರ ರೂ. ರೈತರು ಬಳಸುವ ರಸಗೊಬ್ಬರ, ಇಂಧನ ಸೇರಿದಂತೆ ಎಲ್ಲ ಉಪಕರಣಗಳ ಬೆಲೆ ಅಧಿಕಗೊಂಡಿದೆ. ಜಿಎಸ್‌ಟಿಯಿಂದ ರೈತರ ಆದಾಯವೆಲ್ಲ ಇಲ್ಲವಾಗಿದೆ. ಈಗ ಅವರು ಕೆಳಸ್ತರದಲ್ಲಿದ್ದಾರೆ.
ಕಳೆದ ೧೦ ವರ್ಷಗಳಲ್ಲಿ ದೇಶದ ಆರ್ಥಕತೆ ಕುಸಿದಿದೆ. ನೋಟು ರದ್ದತಿ ದೊಡ್ಡ ದುರಂತ. ಜಿಎಸ್‌ಟಿಯಲ್ಲಿರುವ ದೋಷ, ಕೊರೊನಾ ತಂದ ನಷ್ಟದಿಂದ ಜಿಡಿಪಿ ಬೆಳವಣಿಗೆ ಶೇಕಡ ೬ರಿಂದ ೭ಕ್ಕೆ ಬಂದು ನಿಲ್ಲಲಿದೆ. ರೈತರ ಚಳವಳಿ ನಡೆದಾಗ ಅವರು ಕೇಳಿದ್ದು ೩ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದು. ಸರ್ಕಾರ ಬಗ್ಗಲಿಲ್ಲ. ಪೊಲೀಸರ ಲಾಠಿ ಪ್ರಹಾರಕ್ಕಿಂತ ಮೋದಿ ಅವರನ್ನು ಪರಾವಲಂಬಿ'ಆಂದೋಲನಜೀವಿ' ಎಂದು ಹೇ ಳಿದ್ದು ಹೆಚ್ಚು ನೋವು ತಂದಿದ್ದು ನಿಜ. ಮೋದಿ ಹಾಗೂ ಬಿಜೆಪಿ ಪಂಜಾಬ್, ಪಂಜಾಬಿ ಮತ್ತ ಪಂಜಾಬಿತನಕ್ಕೆ ಅಪಮಾನ ಮಾಡಿರುವುದು ಕ್ಷಮಿಸಲು ಅರ್ಹವಾಗಿಲ್ಲ ಎಂದರು.