For the best experience, open
https://m.samyuktakarnataka.in
on your mobile browser.

ಮರುಮೌಲ್ಯಮಾಪನಕ್ಕೆ ಮೇ 22 ಕೊನೆ ದಿನ

05:23 PM May 09, 2024 IST | Samyukta Karnataka
ಮರುಮೌಲ್ಯಮಾಪನಕ್ಕೆ ಮೇ 22 ಕೊನೆ ದಿನ

ಬೆಂಗಳೂರು: ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆಯುವ ಮತ್ತು ಮರು ಎಣಿಕೆಗೆ ಆನಲೈನ್‌ ಅರ್ಜಿ ಸಲ್ಲಿಸಲು ಮೇ 22ವರೆಗೆ ಅವಕಾಶ ಕಲ್ಪಿಸಲಾಗಿದೆ.
ಮೇ 9ರಿಂದ 16ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನು ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು. ಮೇ 13ರಿಂದ 22ವರೆಗೆ ಅರ್ಜಿ ಸಲ್ಲಿಸಬಹುದು ಜತೆಗೆ ಶುಲ್ಕವನ್ನು ಪಾವತಿಬಹುದಾಗಿದೆ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್‌ ಪ್ರತಿಯನ್ನು ಪಡೆಯಬೇಕು. ಸ್ಕ್ಯಾನ್‌ ಪ್ರತಿ ಪಡೆದು ಅದನ್ನೂ ಖಚಿತಪಡಿಸಿಕೊಂಡ ನಂತರವಷ್ಟೇ ಮರುಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮರುಎಣಿಕೆಗಾಗಿ ಆನಲೈನಲ್ಲಿ ಮಾತ್ರ ಅವಕಾಶ ನೀಡಲಾಗಿದೆ.

ಸಹಾಯವಾಣಿ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಹಾಯವಾಣಿಯನ್ನು ಆರಂಭವಿಸಿದೆ. ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 080 23310075, 23310076ಕ್ಕೆ ಕರೆ ಮಾಡಬಹುದು.