For the best experience, open
https://m.samyuktakarnataka.in
on your mobile browser.

ರಾಮ ಮಂದಿರ ಸ್ಫೋಟ ಬೆದರಿಕೆ ಪತ್ರ: ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆ

05:30 PM Mar 09, 2024 IST | Samyukta Karnataka
ರಾಮ ಮಂದಿರ ಸ್ಫೋಟ ಬೆದರಿಕೆ ಪತ್ರ  ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆ

ದಾವಣಗೆರೆ: ರಾಮಮಂದಿರಕ್ಕೆ ಬಾಂಬ್ ಸ್ಟೋಟಿಸುವ ಬೆದರಿಕೆ ಹಾಕುವಂತಹ ಪ್ರಕರಣಗಳಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಯಾ ವಲಯಗಳ ಪೊಲೀಸ್ ಮಹಾ ನಿರೀಕ್ಷಕರು ಕ್ರಮ ಕೈಗೊಳ್ಳುತ್ತಾರೆ ಎಂದು ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಪ್ಪಾಣಿಯಲ್ಲಿ ಶ್ರೀರಾಮ ಮಂದಿರ ಸ್ಪೋಟಿಸುವ ಬೆದರಿಕೆ ಪತ್ರದ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.

ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಉದ್ಘಾಟಿಸಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಟೋಟಿಸುವುದಾಗಿ ಬೆದರಿಕೆ ಹಾಕುವುದು, ಇ- ಮೇಲ್ ಕಳಿಸುವುದನ್ನು ಮಾಡುತ್ತಿರುತ್ತಾರೆ. ಅದನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಕೆಎಸ್ಸಾರ್ಟಿಸಿಗೂ ಬೆದರಿಕೆ ಬಂದಿದೆ ಎಂದರು.

ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಎಲ್ಲಾ ಲಗೇಜುಗಳ ಪರಿಶೀಲನೆ, ತನಿಖೆಗೆ ಸೂಚನೆ ನೀಡಿದ್ದೇನೆ. ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಿಗೂ ಸೂಕ್ತ ಭದ್ರತೆ ಕಲ್ಪಿಸಲು ಸೂಚಿಸುತ್ತೇನೆ. ಬೆಂಗಳೂರಿನ ರಾಮೇಶ್ವರ ಕೆಫೆ ಸ್ಪೋಟ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ನಮ್ಮ ಸರ್ಕಾರದ ರಾಜೀನಾಮೆ ಕೇಳುತ್ತಿರುವ ಬಿಜೆಪಿ ಅಧಿಕಾರಾವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿಯೇ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ 6 ಕಡೆ ಬಾಂಬ್ ಸ್ಪೋಟವಾಗಿದೆ. ಪ್ರಪಂಚ ಹುಟ್ಟಿದಾಗಿನಿಂದಲೂ ಇಂತಹ ಘಟನೆಗಳು ಆಗುತ್ತಿರುತ್ತವೆ. ಸರ್ಕಾರಗಳೂ ಬಿಗಿಯಾಗಿ ಕೆಲಸ ಮಾಡುತ್ತಿವೆ. ಹಿಂದೆ ಇದೇ ಬಿಜೆಪಿ ಅಧಿಕಾರಾವಧಿಯಲ್ಲಿ ಚನ್ನಸ್ವಾಮಿ ಸ್ಡೇಡಿಯಂ ಬಳಿ ಸ್ಪೋಟ, ಸರಣಿ ಸ್ಪೋಟಗಳು, ಮಲ್ಲೇಶ್ವರಂನಲ್ಲಿ ಬಾಂಬ್ ಸ್ಪೋಟ, ತುಂಗಾ ಪ್ರಯೋಗ ಬಾಂಬ್ ಸ್ಪೋಟಿಸಿತ್ತು ಎಂದು ಅವರು ತಿಳಿಸಿದರು.

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ, ತೀರಾ ಈಚೆಗೆ ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಸ್ಪೋಟ ಆಗಿದೆ. ಸಂಸತ್ ಸ್ಮೋಕ್ ಬಾಂಬ್ ಸ್ಪೋಟದ ಆರೋಪಿಗೆ ಪಾಸ್ ಕೊಟ್ಟಿದ್ದು ಇದೇ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಅಲ್ಲವೇ? ನಾವು ಯಾರ ರಾಜೀನಾಮೆ ಕೇಳಬೇಕು? ಬಿಜೆಪಿಯವರೇ ಪ್ರತಾಪ ಸಿಂಹ್ ರಾಜೀನಾಮೆ ಕೇಳಬೇಕಲ್ಲವೇ ಎಂದು ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಬ್ ಇನ್ಸಪೆಕ್ಟರ್ ಗಳ ವರ್ಗಾವಣೆಗೆ ನೀತಿ ತಂದಿದೆ. ಸಬ್ ಇನ್ಸಪೆಕ್ಟರ್ ಗಳ ವರ್ಗಾವಣೆಗೆ ಕನಿಷ್ಟ ಅವದಿ ಇರಲೆಂಬ ಕಾರಣಕ್ಕೆ ಇದನ್ನು ಮಾಡಿದ್ದೇವೆ. ಈಗ ಎಸ್‌ಐಗಳು ಕನಿಷ್ಟ 2 ಅಥವಾ ಎರಡೂವರೆ ವರ್ಷ ಒಂದು ಕಡೆ ಸಂಪೂರ್ಣವಾಗಿ ಕೆಲಸ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಂತಾಗಿದೆ. ಹಿಂದೆ ಬಿಜೆಪಿ ಅವದಿಯಲ್ಲಿ 1 ವರ್ಷವೂ ಒಂದು ಕಡೆ ಇರಲು ಸಬ್ ಇನ್ಸಪೆಕ್ಟರ್‌ಗಳಿಗೆ ಬಿಡುತ್ತಿರಲಿಲ್ಲ. ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಸಿ.ಟಿ.ರವಿಯಂತಹವರು ನೀವು ಮಾಧ್ಯಮದವರು ತೋರಿಸುತ್ತೀರಿ ಅಂತಾ ಮಾತನಾಡುತ್ತಾರೆ. ಇಂತಹವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.