ಲವ್ ಜಿಹಾದ್: ಶ್ರೀರಾಮ ಸೇನೆಯಿಂದ ಸಹಾಯವಾಣಿ
ಹುಬ್ಬಳ್ಳಿ: ಹಿಂದೂ ಯುವತಿಯರು ಮತ್ತು ಮಹಿಳೆಯರ ರಕ್ಷಣೆಗಾಗಿ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಪ್ರಕರಣಗಳಿಂದ ಹಿಂದೂ ಯುವತಿಯರು, ಮಹಿಳೆಯರನ್ನು ರಕ್ಷಿಸಲು ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿ (ಸಂಖ್ಯೆ 90904 43444) ತೆರೆಯಲಾಗಿದೆ. ಇಲ್ಲಿ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಕರೆ ಮಾಡಬಹದು. ಲವ್ ಜಿಹಾದ್ ಪ್ರಕರಣಗಳು ನಿಲ್ಲುವವರೆಗೆ ನಿರಂತರವಾಗಿ ಸಹಾಯವಾಣಿ ಕಾರ್ಯನಿರ್ವಹಿಸಲಿದೆ, ಈ ಸಹಾಯವಾಣಿಯನ್ನು ಹುಬ್ಬಳ್ಳಿಯಲ್ಲಿರುವ ನಮ್ಮ ಸೇನೆಯ ಕೇಂದ್ರ ಕಚೇರಿಯಿಂದ ನಿರ್ವಹಣೆ ಮಾಡಲಾಗುವುದು. ಇದರಲ್ಲಿ ವಕೀಲರು, ಮಹಿಳಾ ಆಪ್ತಸಮಾಲೋಚಕರು ಸೇರಿ ಐವರ ತಂಡ ಕಾರ್ಯನಿರ್ವಹಿಸಲಿದ್ದಾರೆ. ಹಿಂದೂ ಯುವತಿಯರು ಮತ್ತು ಮಹಿಳೆಯರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ದಿನದ 24 ಗಂಟೆಯೂ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.
ಹಿಂದೂ ಮಹಿಳೆಯರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬಾರದು ಎಂಬ ಉದ್ದೇಶ ನಮ್ಮದಾಗಿದ್ದು, ಸಹಾಯವಾಣಿಗೆ ಕರೆ ಮಾಡಿದ ಮಹಿಳೆಯರು, ಯುವತಿಯರಿಗೆ ಆಪ್ತ ಸಮಾಲೋಚನೆ ಮೂಲಕ ಧೈರ್ಯ ತುಂಬಲಾಗುವುದು. ಮಕ್ಕಳಿಗೆ ಸ್ಕೂಟಿ ಕೊಡತಿರಿ, ಮೊಬೈಲ್ ಕೊಡತಿರಿ ಅವರು ಏನು ಮಾಡುತ್ತಾರೆ ಎನ್ನುವದರತ್ತಲೂ ಗಮನಹರಿಸಿ, ಪಾಲಕರು ಸಹಿತ ಮಕ್ಕಳ ಮೇಲೆ ನಿಗಾವಹಿಸಬೇಕು, ಅವರ ಕಾಲೇಜ್‌ಗೆ ಭೇಟಿ ಕೊಟ್ಟು ಪರಿಶೀಲಿಸಬೇಕು. ಪಶ್ಚಾತ್ತಾಪ ಪಡುವ ಬದಲು ಮೊದಲೇ ಮಕ್ಕಳ ಭವಿಷ್ಯಕ್ಕಾಗಿ ಎಚ್ಚೆತ್ತುಕೊಳ್ಳಬೇಕು ಎಂದರು.