ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಾಯುಮಾಲಿನ್ಯ: ೩ನೇ ಸ್ಥಾನದಲ್ಲಿ ಭಾರತ

02:15 AM Mar 20, 2024 IST | Samyukta Karnataka

ನವದೆಹಲಿ: ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ವಾಯುಮಾಲಿನ್ಯ ಮಹಾನಗರವಾಗಿ ಹೊರಹೊಮ್ಮಿದೆ. ಇದೇ ವೇಳೆ ರಾಷ್ಟ್ರೀಯ ರಾಜಧಾನಿ ದೆಹಲಿ ೨೦೧೮ರಿಂದ ಸತತ ನಾಲ್ಕನೇ ಬಾರಿಗೆ ವಾಯುಮಾಲಿನ್ಯ ರಾಜಧಾನಿ ಎಂಬ ಪಟ್ಟವನ್ನು ಉಳಿಸಿಕೊಂಡಿದೆ. ದೆಹಲಿಯ ಗಾಳಿಯ ಗುಣಮಟ್ಟ ಪ್ರತಿಘನಮೀಟರ್‌ಗೆ ೮೯.೧ರಿಂದ ೯೨.೭ ಮೈಕ್ರೋಗ್ರಾಮ್‌ಗಳಷ್ಟು ಹದಗೆಟ್ಟಿದೆ.
ಬೇಗುಸರಾಯ್ ನಗರ ಹಿಂದಿನ ವರ್ಷ ವಾಯುಮಾಲಿನ್ಯ ನಗರಗಳ ಪಟ್ಟಿಯಿಂದ ದೂರ ಇತ್ತು. ಆದರೆ ಈ ಬಾರಿ ಇತರ ಮಹಾನಗರಗಳನ್ನು ಮೀರಿಸಿದ ದಾಖಲೆ ಮಾಡಿದೆ ಎಂದು ಸ್ವಿಜರ್‌ಲೇಂಡಿನ ಐಕ್ಯೂಏರ್ ವಿಶ್ವ ವಾಯುಗುಣಮಟ್ಟ ವರದಿ ತಿಳಿಸಿದೆ.
ದೇಶದ ಶೇ.೯೬ ಮಂದಿ ವಾಯು ಮಾಲಿನ್ಯಪೀಡಿತರು
ಈ ನಡುವೆ ಭಾರತವು ೧೩೪ ವಾಯುಮಾಲಿನ್ಯ ದೇಶಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಂತರದ ಮೂರನೇ ಅತಿಹೆಚ್ಚು ಮಾಲಿನ್ಯ ಪೀಡಿತ ದೇಶವೆಂಬ ಕುಖ್ಯಾತಿಗೆ ಒಳಗಾಗಿದೆ. ಭಾರತೀಯರಲ್ಲಿ ಬಹುಪಾಲು ಮಂದಿ ವಾಯುಮಾಲಿನ್ಯಕ್ಕೆ ಒಳಗಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ವಾಯುಮಾಲಿನ್ಯವನ್ನು ಪಿಎಂ-೨.೫ ಮಾನದಂಡದಲ್ಲಿ ಅಳೆಯಲಾಗುತ್ತಿದೆ. ಆದರೆ ಭಾರತದ ಶೇ.೯೬ರಷ್ಟು ಅಂದರೆ ೧.೩೩ ಶತಕೋಟಿ ಜನರು ಈ ಮಾನದಂಡದ ಏಳು ಪಟ್ಟುಗಳಷ್ಟು ಹೆಚ್ಚು ಕಳಪೆಮಟ್ಟದ ಗಾಳಿಯನ್ನು ಉಸಿರಾಡುತ್ತಿದ್ದಾರೆ. ೨೦೨೨ರಲ್ಲಿ
ಭಾರತ ವಾಯುಮಾಲಿನ್ಯದಲ್ಲಿ ವಿಶ್ವದಲ್ಲೇ ಎಂಟನೇ ಸ್ಥಾನದಲ್ಲಿತ್ತು. ಆದರೆ ಆನಂತರ ದೇಶದ ವಾಯುಮಾಲಿನ್ಯ ಕುಸಿದಿರುವುದು ಇಲ್ಲಿ ಗಮನಾರ್ಹವೆನಿಸಿದೆ. ದೇಶದ ಶೇ.೬೬ ನಗರಗಳಲ್ಲಿ ವಾರ್ಷಿಕ ಘನಮೀಟರ್‌ಗೆ ಶೇ.೩೫ ಮೈಕ್ರೋ ಗ್ರಾಮ್‌ಗಳಷ್ಟು ವಾಯುಮಾಲಿನ್ಯ ಉಂಟಾಗಿದೆ.

Next Article