For the best experience, open
https://m.samyuktakarnataka.in
on your mobile browser.

ಶಾಲೆಗೆ ಮಕ್ಕಳನ್ನು ಸೇರಿಸುವ ಮುನ್ನ…

07:12 PM May 23, 2024 IST | Samyukta Karnataka
ಶಾಲೆಗೆ ಮಕ್ಕಳನ್ನು ಸೇರಿಸುವ ಮುನ್ನ…

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದಲ್ಲಿರುವ ಅಧಿಕೃತ ಅನುದಾನರಹಿತ ಶಾಲೆ (ಖಾಸಗಿ ಶಾಲೆ)ಗಳ ಅಧಿಕೃತ ಶಾಲೆಗಳ ಪಟ್ಟಿಯನ್ನು ತನ್ನ ವೆಬ್ಸೈಟ್‌ನಲ್ಲಿ ಪ್ರಕಟಿಸಿದೆ.
ಮಕ್ಕಳನ್ನು ಶಾಲೆಗೆ ಸೇರಿಸುವ ಮುಂಚಿತವಾಗಿ ಈ ಪಟ್ಟಿಯನ್ನು ಪರಿಶೀಲಿಸುವಂತೆ ಶಿಕ್ಷಣ ಇಲಾಖೆ ಪಾಲಕರಲ್ಲಿ ಮನವಿ ಮಾಡಿದೆ. ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ಮಾಹಿತಿಯನ್ನು ಕ್ರೋಡೀಕರಿಸಿರುವ ಶಿಕ್ಷಣ ಇಲಾಖೆಯು ತನ್ನ https://schooleducation.karnataka.gov.in/ ನಲ್ಲಿ ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ.