For the best experience, open
https://m.samyuktakarnataka.in
on your mobile browser.

ಶೆಟ್ಟರ್ ಈ ಬಾರಿ `ಬೆಳಗಾವಿ'ಯಲ್ಲಿ ಮತದಾನ

03:30 AM May 07, 2024 IST | Samyukta Karnataka
ಶೆಟ್ಟರ್ ಈ ಬಾರಿ  ಬೆಳಗಾವಿ ಯಲ್ಲಿ ಮತದಾನ

ಹುಬ್ಬಳ್ಳಿ: ತಮ್ಮ ರಾಜಕೀಯ ಜೀವನ ಪ್ರಾರಂಭಕ್ಕೂ ಮುಂಚಿನಿಂದಲೂ ಹುಬ್ಬಳ್ಳಿಯಲ್ಲಿಯೇ ಮತದಾನ ಮಾಡಿಕೊಂಡು ಬಂದಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರು ಈ ಬಾರಿ ತಾವು ಪ್ರತಿನಿಧಿಸುತ್ತಿರುವ ಬೆಳಗಾವಿ ಕ್ಷೇತ್ರದಲ್ಲಿ ಮಂಗಳವಾರ ಮತದಾನ ಮಾಡಲಿದ್ದಾರೆ.
ಬೆಳಗಾವಿಯಲ್ಲಿ ಅವರು ಮನೆ ಮಾಡಿರುವ ವಿಶ್ವೇಶ್ವರನಗರ ಬಡಾವಣೆಯ ಮತಗಟ್ಟೆಯಲ್ಲಿ ಶೆಟ್ಟರ ಅವರು ಮತದಾನ ಮಾಡಲಿದ್ದಾರೆ. ಅವರ ಪತ್ನಿ, ಮಗ ಸೇರಿದಂತೆ ಪರಿವಾರದ ಇತರ ಸದಸ್ಯರು ಹುಬ್ಬಳ್ಳಿಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಷ್ಟು ವರ್ಷದಲ್ಲಿ ಇದೇ ಪ್ರಪ್ರಥಮ ಬಾರಿಗೆ ಶೆಟ್ಟರ್ ಅವರು ಹುಬ್ಬಳ್ಳಿಯಾಚೆಗೆ ಪ್ರಥಮ ಬಾರಿಗೆ ಸ್ಪರ್ಧಿಸಿದ್ದಲ್ಲದೇ ಮತದಾನವನ್ನೂ ಪ್ರಥಮ ಬಾರಿಗೆ ಮಾಡುತ್ತಿದ್ದಾರೆ. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಬಹುತೇಕ ಅಭ್ಯರ್ಥಿಗಳು ಮತ ಚಲಾಯಿಸುತ್ತಾರೆ. ಅಂತೆಯೇ ಶೆಟ್ಟರ ಅವರು ಬೆಳಗಾವಿ ಪ್ರತಿನಿಧಿಸುತ್ತಿರುವುದರಿಂದ ಬೆಳಗಾವಿಯಲ್ಲಿ ಮತದಾನ ಮಾಡುತ್ತಿರುವುದು ಸಹಜವಾಗಿದೆ ಎಂದು ಅವರ ಆಪ್ತರು ಹೇಳುತ್ತಾರೆ.