For the best experience, open
https://m.samyuktakarnataka.in
on your mobile browser.

ಐಸ್‌ಕ್ರೀಂ ಮ್ಯಾನ್‌ ಖ್ಯಾತಿಯ ರಘುನಂದನ್‌ ಕಾಮತ್‌ ಇನ್ನಿಲ್ಲ

10:50 AM May 18, 2024 IST | Samyukta Karnataka
ಐಸ್‌ಕ್ರೀಂ ಮ್ಯಾನ್‌ ಖ್ಯಾತಿಯ ರಘುನಂದನ್‌ ಕಾಮತ್‌ ಇನ್ನಿಲ್ಲ

ಮುಂಬೈ: 'ಐಸ್‌ಕ್ರೀಂ ಮ್ಯಾನ್‌ ' ಎಂದು ಖ್ಯಾತಿ ಗಳಿಸಿರುವ ಜನಪ್ರಿಯ ನ್ಯಾಚುರಲ್ಸ್‌ ಐಸ್‌ಕ್ರೀಂ ಸಂಸ್ಥೆಯ ಮಂಗಳೂರು ಮೂಲದ ರಘುನಂದನ್‌ ಶ್ರೀನಿವಾಸ್ ಕಾಮತ್ (75ವ) ಕಳೆದ ತಡರಾತ್ರಿ ನಿಧನ ಹೊಂದಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಾಗಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.
ರಘುನಂದನ್ ಕಾಮತ್ ಅವರ ತಂದೆ ಹಣ್ಣು ವ್ಯಾಪಾರಿಯಾಗಿದ್ದ ಕಾರಣ ರಘುನಂದನ್ ಅವರಿಗೆ ಆ ಹಣ್ಣುಗಳ ವಿಶೇಷತೆ ತಿಳಿದಿತ್ತು. ತನ್ನ 14ನೇ ವಯಸ್ಸಿನಲ್ಲೇ ಮುಂಬಯಿಗೆ ತೆರಳಿದ್ದ ರಘುನಂದನ್ ಕಾಮತ್ ಅವರು ಸಹೋದರನ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದರು. 1984 ರಲ್ಲಿ ಕೇವಲ 4 ಮಂದಿ ಸಿಬ್ಬಂದಿ ಜತೆ ನ್ಯಾಚುರಲ್ ಐಸ್ ಕ್ರೀಂ ಸಂಸ್ಥೆಯನ್ನು ಆರಂಭಿಸಿದ್ದರು.