For the best experience, open
https://m.samyuktakarnataka.in
on your mobile browser.

ಸಚಿವ ನಾಗೇಂದ್ರ ಬಂಧಿಸಿ, ಸಿಬಿಐ ತನಿಖೆಗೆ ವಹಿಸಲಿ

01:35 PM Jun 01, 2024 IST | Samyukta Karnataka
ಸಚಿವ ನಾಗೇಂದ್ರ ಬಂಧಿಸಿ  ಸಿಬಿಐ ತನಿಖೆಗೆ ವಹಿಸಲಿ

ಹುಬ್ಬಳ್ಳಿ: ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಸಂಬಂಧ ಸಚಿವ ನಾಗೇಂದ್ರರನ್ನು ಬಂಧಿಸಬೇಕು. ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಬಹುದೊಡ್ಡ ಭ್ರಷ್ಟಾಚಾರ ಹಗರಣವಾಗಿದ್ದು, ಇದರ ತನಿಖೆ ಸಿಬಿಐಗೇ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಚಿವ ನಾಗೇಂದ್ರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಇದರಲ್ಲಿ ಸಿಎಂ ಸೇರಿದಂತೆ ಸಂಬಂಧಿಸಿದ ಎಲ್ಲರ ಮೇಲೂ ತನಿಖೆ ಆಗಬೇಕು ಎಂದು ಜೋಶಿ ಆಗ್ರಹಿಸಿದರು.

ಚುನಾವಣೆಗೆ ಬಳಸಲೆಂದೇ ಹಣ ಲೂಟಿ: ಚುನಾವಣೆಗೆ ಬಳಸಲೆಂದೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 100 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಸರ್ಕಾರಿ ದುಡ್ಡು ಲಪಟಾಯಿಸಿ ಚುನಾವಣೆ ನಡೆಸಲು ಷಡ್ಯಂತ್ರ ನಡೆಸಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು

ಯಾವ ಕಾರಣಕ್ಕಾಗಿ ನಿಗಮದ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸಿದರು? ಎಂಬುದಕ್ಕೆ ಸರ್ಕಾರ ಇನ್ನೂ ಉತ್ತರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಇದೊಂದು ಬಹುದೊಡ್ಡ ಹಗರಣವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಪಾರದರ್ಶಕ ತನಿಖೆ ನಡೆಯುವುದು ಅನುಮಾನ ಎಂದು ಹೇಳಿದರು.

ಯುನಿಯನ್ ಬ್ಯಾಂಕ್ ನ ಕೆಲ ಅಧಿಕಾರಿಗಳೂ ಇದರಲ್ಲಿ ಇರುವುದರಿಂದ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೇ ವಹಿಸಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು.