For the best experience, open
https://m.samyuktakarnataka.in
on your mobile browser.

ಸಾವಿರಾರು ಗೋವುಗಳ ಸಂರಕ್ಷಕ ಅರುಣ್ ಅವರಿಗೆ ಸನ್ಮಾನ

07:12 PM May 18, 2024 IST | Samyukta Karnataka
ಸಾವಿರಾರು ಗೋವುಗಳ ಸಂರಕ್ಷಕ ಅರುಣ್ ಅವರಿಗೆ ಸನ್ಮಾನ

ಬೆಂಗಳೂರು : ಮಹಾಭಾರತ ಮತ್ತು ಭಾಗವತದಲ್ಲಿ ಭಗವಾನ್ ಶ್ರೀ ಕೃಷ್ಣ ತೋರಿದ ಮಾರ್ಗದಲ್ಲಿ ನಮ್ಮ ಬದುಕನ್ನು ರೂಪಿಸಿಕೊಂಡರೆ ಸಾರ್ಥಕತೆ ಸಾಧ್ಯ ಎಂದು ಭಂಡಾರ ಕೇಳಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಭಾಗವತಶ್ರಮ ಪ್ರತಿಷ್ಠಾನ, ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಸಯುಕ್ತವಾಗಿ ಹಮ್ಮಿಕೊಂಡಿರುವ ಶ್ರೀ ವಿದ್ಯಾಮಾನ್ಯ ತೀರ್ಥ ಗುರುಗಳ ಆರಾಧನಾ ಉತ್ಸವ ಮತ್ತು ವೇದವ್ಯಾಸ ಜಯಂತಿ ಸರಣಿ ಕಾರ್ಯಕ್ರಮದ ಮೂರನೇ ದಿನ ಆಯೋಜನೆಗೊಂಡಿರುವ ವಿಶೇಷ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು. ಧರ್ಮ ಮಾರ್ಗದಲ್ಲಿ ನಾವು ಸಾಗಿದಾಗ ದಿನೇ ದಿನೇ ಅಭಿವೃದ್ಧಿ ಸಾಧ್ಯವಿದೆ. ಶ್ರೀ ಕೃಷ್ಣನ ಅನನ್ಯ ಸೇವಕರಾದ ಪಾಂಡವರು ಹೇಗೆ ಬದುಕಿದ್ದರು ಎಂಬುದನ್ನು ಗಮನಿಸಿ ಎಂದರು.