ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ವಾಮೀಜಿಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

12:45 AM Apr 11, 2024 IST | Samyukta Karnataka

ಕೆ.ವಿ.ಪರಮೇಶ್
ಧರ್ಮದಲ್ಲಿ ರಾಜಕಾರಣ ಇರಬಾರದು. ಆದರೆ ರಾಜಕಾರಣದಲ್ಲಿ ಧರ್ಮ ಇರಬೇಕೆಂಬುದು ಸಹಜ ಮಾತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಇನ್ನಷ್ಟು ವಿಸ್ತೃತ ಮತ್ತು ವಿಭಿನ್ನ ರೂಪ ಪಡೆದುಕೊಂಡಿದ್ದು ರಾಜಕಾರಣಕ್ಕೆ ಧರ್ಮಗುರುಗಳ ಅಧಿಕೃತ ಪ್ರವೇಶವಾಗಿದೆ. ಹಾಗಾಗಿ ಧರ್ಮಕಾರಣ ಮತ್ತು ರಾಜಕಾರಣದ ನಡುವೆ ಬಿಟ್ಟಿರದಷ್ಟು ಬಾಂಧವ್ಯ ಬೆಸೆದುಕೊಂಡಿದೆ. ಅದರಲ್ಲೂ ಚುನಾವಣೆ ಬಂದರೆ ಅಭ್ಯರ್ಥಿಗಳಾದಿಯಾಗಿ ರಾಜಕಾರಣಿಗಳು ಮಠಮಾನ್ಯಗಳಿಗೆ ಎಡತಾಕುವುದು ಅನಿವಾರ್ಯ ಎನ್ನುವಂತಾಗಿದೆ.
ಹೇಳಿ ಕೇಳಿ ಇದು ಲೋಕಸಭಾ ಚುನಾವಣೆ. ಕನಿಷ್ಠ ೫ ರಿಂದ ೧೫ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ಒಂದು ಸಂಸತ್ ಕ್ಷೇತ್ರದಲ್ಲಿ ಲಕ್ಷಾಂತರ ಮತದಾರರಿರುತ್ತಾರೆ. ಎಲ್ಲರನ್ನೂ ತಲುಪುವುದು ಕಷ್ಟಸಾಧ್ಯ. ಇದಕ್ಕೆ ರಾಜಕೀಯ ಪಕ್ಷಗಳು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ನಮ್ಮಲ್ಲಿ ಮಠಗಳಿಗೇನೂ ಕೊರತೆಯಿಲ್ಲ. ದಶಕಗಳ ಹಿಂದೆ ಪ್ರಬಲ ಸಮುದಾಯಗಳಿಗಷ್ಟೇ ಸೀಮಿತವಾಗಿದ್ದು ಮಠಗಳು ಇದೀಗ ಸಣ್ಣಪುಟ್ಟ ಜಾರಿಗೊಂದು ಮಠಗಳು ಸೃಷ್ಟಿಯಾಗಿವೆ, ಸ್ವಾಮೀಜಿಗಳ ಸಂಖ್ಯೆಯೂ ದೊಡ್ಡಸಂಖ್ಯೆಯಲ್ಲಿದೆ. ಅಷ್ಟೇ ಸಂಖ್ಯೆಯಲ್ಲಿ ಭಕ್ತಬಳಗವನ್ನೂ ಹೊಂದಿವೆ.
ಬೃಹತ್ ಭಕ್ತಬಳಗ ಟಾರ್ಗೆಟ್
ರಾಜ್ಯದಲ್ಲಿ ಒಂದೊಂದು ಜಿಲ್ಲೆಯಲ್ಲಿಯೂ ವಿವಿಧ ಜಾತಿಗಳಿಗೆ ಸೇರಿದ ಹತ್ತಾರು ಮಠಗಳಿವೆ. ಕೆಲವು ಪ್ರಭಾವಿ ಎನಿಸಿದ್ದರೆ ಇನ್ನೂ ಕೆಲವು ಪ್ರಬುದ್ಧಮಾನಕ್ಕೆ ಬರುತ್ತಿವೆ. ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿರುವ ವೀರಶೈವ ಲಿಂಗಾತಯ, ಒಕ್ಕಲಿಗ ಮಹಾಸಂಸ್ಥಾನಗಳು ಸೇವೆ ಮೂಲಕವೇ ದೊಡ್ಡಮಟ್ಟದಲ್ಲಿ ಬೆಂಬಲಿಗ ಭಕ್ತರನ್ನೂ ಒಳಗೊಂಡಿವೆ. ಚುನಾವಣೆಯಂತಹ ನಿರ್ಣಾಯಕ ಸಂದರ್ಭಗಳಲ್ಲಿ ಮಠಾಧೀಶರ ಸಂದೇಶ ಕೆಲವೊಮ್ಮೆ ಕೆಲಸ ಮಾಡಿದೆ ಎನ್ನುವುದೂ ಸುಳ್ಳಲ್ಲ.
ಈ ಹಿನ್ನೆಲೆಯಲ್ಲಿಯೇ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಮಠಗಳಿಗೆ ಭೇಟಿ ನೀಡಿ ಶ್ರೀಗಳಿಂದ ಸಹಕಾರ ಕೋರುವುದಿದೆ. ವಿಶೇಷವೆಂದರೆ ಬರುವ ಎಲ್ಲಾ ಪಕ್ಷಗಳ ನಾಯಕರಿಗೂ ಸ್ವಾಮೀಜಿಗಳು ಸಕಾರಾತ್ಮಕ ಸಂದೇಶವನ್ನೇ ರವಾನಿಸುವುದು ವಾಡಿಕೆ. ಇದನ್ನು ದಾಟಿಯೂ ಮಠದ ನೆಟ್‌ವರ್ಕ್ ಕೆಲಸ ಮಾಡಿರುವ ನಿದರ್ಶನಗಳೂ ಇಲ್ಲದಿಲ್ಲ.

Next Article