ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

೧೪ರಿಂದ ಧಾರವಾಡ ಸಿಬಿಟಿ ನಿರ್ಮಾಣ ಕಾಮಗಾರಿ ಆರಂಭ

07:19 PM Feb 11, 2024 IST | Samyukta Karnataka

ಧಾರವಾಡ: ನೂತನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಪ್ರಯುಕ್ತ ಫೆ. ೧೪ರಿಂದ ಸಿಬಿಟಿಯಿಂದ ಸಂಚರಿಸುವ ನಗರ ಸಾರಿಗೆ ಬಸ್ಸುಗಳನ್ನು ತಾತ್ಕಾಲಿಕವಾಗಿ ಎಲ್.ಇ.ಎ. ಕ್ಯಾಂಟೀನ್ ಹಾಗೂ ಕಿಟೆಲ್ ಕಾಲೇಜು ಹಿಂಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ನಗರದ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಈಗ ಇರುವ ಸಿಬಿಟಿ ಸ್ಥಳದಲ್ಲಿ ಸುಸಜ್ಜಿತ ನೂತನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಆರಂಭಿಸಲಾಗುತ್ತಿದೆ. ಅದಕ್ಕಾಗಿ ಸಿಬಿಟಿಯನ್ನು ತೆರವುಗೊಳಿಸಬೇಕಾಗಿರುತ್ತದೆ. ಆದ್ದರಿಂದ ಸಿಬಿಟಿಯಿಂದ ಬಸ್ಸುಗಳ ಸಂಚಾರವನ್ನು ಫೆ. ೧೪ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.
ಸಾರಿಗೆ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಸ್ಥಳ ಸಮೀಕ್ಷೆ ಮಾಡಿ ತಾತ್ಕಾಲಿಕ ಸ್ಥಳಗಳನ್ನು ಗುರುತಿಸಲಾಗಿದೆ. ಅದರಂತೆ ಪ್ರಸ್ತುತ ಸಿಬಿಟಿ ಯಿಂದ ಸಂಚರಿಸುವ ಬಸ್ಸುಗಳನ್ನು ಫೆ. ೧೪, ಬುಧವಾರ ಬೆಳಿಗ್ಗೆಯಿಂದ ತಾತ್ಕಾಲಿಕವಾಗಿ ಎಲ್.ಇ.ಎ. ಕ್ಯಾಂಟೀನ್ ಹತ್ತಿರ ಹಾಗೂ ಕಿಟೆಲ್ ಕಾಲೇಜು ಹಿಂಭಾಗದ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ.

ಎಲ್.ಇ.ಎ. ಕ್ಯಾಂಟೀನ್ ನಿಂದ ಹೊರಡುವ ಬಸ್ ಮಾರ್ಗಗಳು
ಎತ್ತಿನ ಗುಡ್ಡ, ಕೃಷಿ ವಿಶ್ವವಿದ್ಯಾಲಯ, ಪಾವಟೆ ನಗರ, ಬನಶ್ರೀ ನಗರ, ಕೆಂಗೇರಿ ಆಂಜನೇಯ ನಗರ, ಗುರು ನಗರ, ನ್ಯೂ ಬಾಯ್ಸ್ ಹಾಸ್ಟೆಲ್, ಚೈತನ್ಯ ನಗರ, ವಿನಾಯಕ ನಗರ, ಸಾಯಿ ನಗರ, ಶಿವಗಿರಿ ಸಂಪಿಗೆ ನಗರ, ರಾಧಾಕೃಷ್ಣ ನಗರ, ಜೆ.ಎಸ್.ಎಸ್. ಸ್ಕೂಲ್, ಬೇಂದ್ರೆ ನಗರ, ಹೈಕೋರ್ಟ್, ಕಾಯಕ ನಗರ, ಶಿರಡಿ ನಗರ ಹಾಗೂ ಐ.ಐ.ಟಿ.

ಕಿಟೆಲ್ ಕಾಲೇಜು ಹಿಂಭಾಗದಿಂದ ಹೊರಡುವ ಬಸ್ ಮಾರ್ಗಗಳು
ಧಾರವಾಡ ರೈಲು ನಿಲ್ದಾಣ, ಜೋಗ ಯಲ್ಲಾಪುರ, ರಾಜೀವ ಗಾಂಧಿ ನಗರ, ಸಂಗೊಳ್ಳಿ ರಾಯಣ್ಣ ನಗರ, ಮಂಜುನಾಥ ಕಾಲೋನಿ, ಚಿನ್ಮಯ ಕಾಲೋನಿ, ಲೋಹಿಯ ನಗರ, ತೇಜಸ್ವಿನಿ ನಗರ, ಸರಸ್ವತಿ ಪುರ, ಸೋಮೇಶ್ವರ ದೇವಸ್ಥಾನ, ಶ್ರೀರಾಮನಗರ, ಕಲ್ಯಾಣನಗರ, ಹನುಮಂತ ನಗರ, ಜಾದವ ನಗರ, ಗಾಮನಗಟ್ಟಿ, ನವಲೂರು, ತಡಸಿನ ಕೊಪ್ಪ, ಉದಯಗಿರಿ, ವನಶ್ರೀ ನಗರ, ಐ.ಐ.ಐ.ಟಿ.

ಮದಿಹಾಳ, ಮಾಳಾಪುರ ಹಾಗೂ ಮೆಹಬೂಬ ನಗರ ಕಡೆಗೆ ಹೋಗುವ ಬಸ್ಸುಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಮಾಸಿಕ ರಿಯಾಯಿತಿ ಪಾಸುಗಳು ನಗರ ಸಾರಿಗೆ ಹಾಗೂ ಉಪನಗರ ಸಾರಿಗೆ ಬಸ್ಸುಗಳ ಮಾಸಿಕ ರಿಯಾಯಿತಿ ಪಾಸುಗಳ ವಿತರಣೆಗೆ ಧಾರವಾಡ ಹಳೆ ಬಸ್ ನಿಲ್ದಾಣದಲ್ಲಿರುವ ಪಾಸ್ ವಿತರಣೆ ಕೌಂಟರ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

Next Article