ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

35 ಸೊಮಾಲಿ ಕಡಲ್ಗಳ್ಳರು ಮುಂಬೈ ಪೊಲೀಸರಿಗೆ ಹಸ್ತಾಂತರ

02:08 PM Mar 23, 2024 IST | Samyukta Karnataka

ಭಾರತೀಯ ನೌಕಾಪಡೆಯು ಕೋಲ್ಕತ್ತಾದ ಅರಬ್ಬಿ ಸಮುದ್ರದ ಬಳಿ 35 ಸೊಮಾಲಿಯನ್ ಕಡಲಗಳ್ಳರನ್ನು ಬಂಧಿಸಿದ್ದು, ಮುಂಬೈಗೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 40 ಗಂಟೆಗಳ ಕಾಲ ನಿರಂತರವಾದ ಹೈ-ಟೆಂಪೋ ಕಾರ್ಯಾಚರಣೆಗಳ ನಂತರ ಮಾರ್ಚ್ 16ರಂದು ಕಡಲುಗಳ್ಳರ ಒಗಿ ರುಯೆನ್ ಹಡಗನ್ನು ತಡೆದು ಅದರಲ್ಲಿದ್ದ ಭಾರತೀಯ ಹಾಗೂ ಬಲ್ಗೇರಿಯಾದ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಡಗನ್ನು 2023 ಡಿಸೆಂಬರ್‍ನಲ್ಲಿ ಅಪಹರಣ ಮಾಡಲಾಗಿತ್ತು. ಐಎನ್‌ಎಸ್ ಕೋಲ್ಕತ್ತಾ, ಬಂಧಿತ 35 ಕಡಲ್ಗಳ್ಳರೊಂದಿಗೆ, ಮಾರ್ಚ್ 23 ರಂದು ಮುಂಬೈಗೆ ಮರಳಿತು ಮತ್ತು ಭಾರತೀಯ ಕಾನೂನುಗಳಿಗೆ ಅನುಸಾರವಾಗಿ, ನಿರ್ದಿಷ್ಟವಾಗಿ ಕಡಲ್ಗಳ್ಳತನ ವಿರೋಧಿ ಕಾಯಿದೆ 2022 ರ ಪ್ರಕಾರ ಮುಂದಿನ ಕಾನೂನು ಕ್ರಮಕ್ಕಾಗಿ ಕಡಲ್ಗಳ್ಳರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ನೌಕಾಪಡೆ ತಿಳಿಸಿದೆ.

Next Article