ತಾಯಿ ಮೇಲೆ ಕೊಡಲಿಯಿಂದ ಹಲ್ಲೆ
11:01 AM Jul 30, 2024 IST
|
Samyukta Karnataka
ರೋಣ: ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಮಗ ತನ್ನ ಹೆತ್ತ ತಾಯಿಯ ಮೇಲೆಯೇ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗ್ರಾಮದ ಕುರುಬರ ಓಣಿಯಲ್ಲಿ ಈ ಕೃತ್ಯ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ವ ಎಂಬ ಮಹಿಳೆ ಹಲ್ಲೆಗೊಳಗಾಗಿದ್ದು, ಗೌರವ್ವನಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳನ್ನು ರೋಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಯಿಯ ಮೇಲೆ ಹಲ್ಲೆ ನಡೆಸಿ ರೋಡಿಗೆ ಬಂದು ಸಾರ್ವಜನಿಕರಿಗೂ ಕೊಡಲಿ ಝಳಪಿಸಿ ಅಟ್ಟಹಾಸ ಮೆರೆದಿದ್ದಾನೆ. ಈ ವೇಳೆ ಆತಂಕಗೊಂಡ ಜನರು 112ಗೆ ಸಂಪರ್ಕ ಮಾಡಿದ್ದಾರೆ, ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ದಾವಿಸಿದ ಪೊಲೀಸ್‌ರು ಮಾನಸಿಕ ಅಸ್ವಸ್ಥ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಧಾರವಾಡದ ನಿಮ್ಹಾನ್ಸ್‌ಗೆ ಶಿವಪ್ಪನನ್ನು ರವಾನಿಸಲಾಗಿದೆ.
Next Article