ತಿಳಿದೂ ಮಾಡುತ್ತಿದ್ದಾರೋ ತಿಳಿಯದೇ ಮಾಡುತ್ತಿದ್ದಾರೋ ಅನ್ನೋದೇ ಯಕ್ಷ ಪ್ರಶ್ನೆ…
ಬೆಂಗಳೂರು: ಜನರಿಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿ ತೋರಿಸುವ ಕೆಲಸ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದವರು ಅದನ್ನು ತಿಳಿದೂ ಮಾಡುತ್ತಿದ್ದಾರೋ ತಿಳಿಯದೇ ಮಾಡುತ್ತಿದ್ದಾರೋ ಅನ್ನೋದೇ ಯಕ್ಷ ಪ್ರಶ್ನೆ ಎಂದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕಾಂಗ್ರೆಸ್ ನೀತಿಯ ದುರುಳತೆ ದುಷ್ಟತೆಯನ್ನು ನೋಡಿದರೆ, ತಿಳಿಯದೆ ಮಾಡುತ್ತಿರುವುದು ಅಂತ ಹೇಳಲಾಗುವುದಿಲ್ಲ. ಇದು ಕಾಂಗ್ರೆಸ್ ಜಾಯಮಾನ. ಅನ್ವರ್ ಮಾನಾಪಾಟೀಲ್ ವರದಿಯ ಪ್ರಕಾರ 29,000 ಎಕರೆ ವಕ್ಫ್ ಆಸ್ತಿಯನ್ನ ಕಾಂಗ್ರೆಸ್ ನ ಅತ್ಯಂತ ಪ್ರಭಾವಿ ನಾಯಕರು ಕಬಳಿಸಿದ್ದಾರೆ. ವಿಧಾನ ಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿ ಆ ವರದಿಯನ್ನು ಪರಿಶೀಲನೆ ಮಾಡಿ ಒಂದು ವರದಿಯನ್ನು ಸರ್ಕಾರಕ್ಕೆ ನೀಡಿದೆ. ಆ ವರದಿಯ ಪ್ರಕಾರ ಮೊದಲಿನಿಂದಲೂ ಇರುವ ವಕ್ಫ್ ಆಸ್ತಿಯ ದುರುಪಯೋಗವನ್ನು ನಿಲ್ಲಿಸುತ್ತೇವೆಂದು ಇದೆ. ವಕ್ಫ್ ಆಸ್ತಿಯನ್ನು ವೈಯಕ್ತಿಕವಾಗಿ ಬಳಸುವ ಅಧಿಕಾರ ಯಾರಿಗೂ ಇಲ್ಲ. ಹಾಗಾಗಿ ನಾವು ಆ ಆಸ್ತಿಯ ದುರುಪಯೋಗವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ ಎಂದರು.