ತುಂಗಭದ್ರಾ ಆಣೆಕಟ್ಟು ವೀಕ್ಷಣೆಗೆ ದೌಡಾಯಿಸಿದ ಕೊಪ್ಪಳ ಗವಿಶ್ರೀ
08:00 AM Aug 12, 2024 IST | Samyukta Karnataka
ವಿಜಯನಗರ: ತುಂಗಭದ್ರಾ ಆಣೆಕಟ್ಟೆಯ ೧೯ ನೇ ಕ್ರಸ್ಟ್ ಗೇಟ್ ಕೊಚ್ಚಿಹೋದ ಹಿನ್ನೆಲೆಯಲ್ಲಿ ಸೋಮುವಾರ ಬೆಳ್ಳಂ ಬೆಳಗ್ಗೆ ಜಲಾಶಯಕ್ಕೆ ದೌಡಾಯಿಸಿದ ಕೊಪ್ಪಳದ ಅಭಿನವ ಗವಿಸಿದ್ದೇಶ ಸ್ವಾಮೀಜಿ ಜಲಾಶಯ ವೀಕ್ಷಣೆ ಮಾಡಿದರು.
ಜಲಾಶಯದ ಕ್ರಸ್ಟ್ ಗೇಟ್ಗಳಿಂದ ಅಪಾರ ನೀರು ಹೊರ ಹೋಗುತ್ತಿರುವ ಹಿನ್ನೆಲೆ ಕಳವಳಗೊಂಡ ಶ್ರೀಗಳು ಬೆಳಂ ಬೆಳಗ್ಗೆಯೇ ಆಗಮಿಸಿದರು.
ತುಂಗಭದ್ರಾ ಆಣೆಕಟ್ಟೆಗೆ ಬಂದ ಶ್ರೀಗಳು ಆಣೆಕಟ್ಟೆಯ ಮೇಲೆ ವಾಹನದಲ್ಲಿ ತೆರಳದೇ ನಡೆದುಕೊಂಡೇ ಹೋಗಿ ಜಲಾಶಯ ವೀಕ್ಷಣೆ ಮಾಡಿದ್ದಾರೆ.
ಗೇಟ್ ಕಿತ್ತುಹೋದ, ಮರು ಅಳವಡಿಕೆ ಬಗ್ಗೆ ಅಲ್ಲಿದ್ದ ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿರುವ ಗವಿಶ್ರೀಗಳು, ಜಲಾಶಯದ ಸ್ಥಿತಿ ಗತಿ, ಈಗಿರುವ ಪರಿಸ್ಥಿತಿಯನ್ನು ಕಂಡುಕೊಂಡರು. ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಯ ಜೀವನಾಡಿಯಾಗಿರುವ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಇಂತಹ ಅವಘಡ ಎದುರಾಗಿದ್ದು, ರೈತರಿಗೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಆಲಿಸಿ ಮರಕುಪಟ್ಟರು.