For the best experience, open
https://m.samyuktakarnataka.in
on your mobile browser.

ತುಂಗಭದ್ರೆ ಒಳಹರಿವು ಹೆಚ್ಚಳ: ರೈತರ ಮುಗದಲ್ಲಿ ಸಂತಸ

12:57 PM Aug 20, 2024 IST | Samyukta Karnataka
ತುಂಗಭದ್ರೆ ಒಳಹರಿವು ಹೆಚ್ಚಳ  ರೈತರ ಮುಗದಲ್ಲಿ ಸಂತಸ

ವಿಜಯನಗರ: ತಾತ್ಕಾಲಿಕ ಗೇಟ್​ ಅಳವಡಿಕೆ ಸಕ್ಸಸ್​ ಆದ ಕಾರಣ ಜಲಾಶಯದಲ್ಲಿ ನೀರು ಶೇಖರಣೆಯಾಗುತ್ತಿದೆ. ಮಾತ್ರವಲ್ಲದೆ ಒಳಹರಿವು ಪ್ರಮಾಣದಲ್ಲೂ ಏರಿಕೆ ಕಂಡಿದೆ.

ತುಂಗಭದ್ರಾ ಜಲಾಶಯ ಕ್ರೆಸ್ಟ್​ ಗೇಟ್​ ತುಂಡರಿಸಿ ಅನೇಕ ಪ್ರಮಾಣದ ನೀರು ನದಿ ಪಾಲಾಗಿತ್ತು. ಆದರೀಗ ಡ್ಯಾಂ ತಜ್ಞ ಕನ್ನಯ್ಯ ಅವರ ಸಹಾಯದಿಂದ ತುಂಗಭಧ್ರಾ ನೀರಿಗೆ ತಾತ್ಕಾಲಿತ ಗೇಟ್​ ಅಳವಡಿಸಲಾಗಿದೆ. 19ನೇ ಕ್ರೆಸ್ಟ್​ ಗೇಟ್​ ತುಂಡರಿಸಿದ ಕಾರಣ ತುಂಗಭದ್ರಾ ಜಲಾಶಯದಿಂದ ಅನೇಕ ನೀರು ನದಿ ಸೇರಿತ್ತು. ಇದರಿಂದ ರೈತರಿಗೆ ಬೇಸರವಾಗಿತ್ತು. ಆದರೀಗ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ತುಂಗಭದ್ರಾ ಡ್ಯಾಂನ ಒಳಹರಿವು ಏರಿಕೆಯಾಗಿದೆ. ಜಲಾಶಯದಲ್ಲಿ ದಿನಕ್ಕೊಂದು ಟಿಎಂಸಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ನಿನ್ನೆ 75 ಟಿಎಂಸಿ ನೀರು ಸಂಗ್ರಹವಿತ್ತು. ಇಂದು 76.912 ಟಿಎಂಸಿ ನೀರು ಸಂಗ್ರಹವಾಗಿದೆ. 31,033 ಕ್ಯೂಸೆಕ್ ನೀರು ಒಳಹರಿವಿದೆ. 10,201 ಕ್ಯೂಸೆಕ್ ನೀರು ಹೊರ ಹರಿವಿದೆ ಎಂದು ತಿಳಿದುಬಂದಿದೆ. ತುಂಗಭದ್ರೆಯನ್ನು ನಂಬಿ ಅದೆಷ್ಟೋ ಜೀವರಾಶಿಗಳು ಬದುಕುತ್ತಿವೆ. ಅದರಲ್ಲೂ ರೈತರು ಇದನ್ನೇ ನಂಬಿ ಕೃಷಿಯನ್ನು ಮಾಡುತ್ತಾರೆ. ಆದರೆ 19ನೇ ಕ್ರೆಸ್ಟ್​ ಗೇಟ್​​ ಒಡೆದ ಕಾರಣ ರೈತರಲ್ಲಿ ಭಯದ ಜೊತೆಗೆ ಈ ಬಾರಿ ನೀರಿಲ್ಲದೆ ಕೃಷಿ ಮಾಡುವುದು ಹೇಗೆ ಎಂಬ ಭಯವಿತ್ತು. ಆದರೀಗ ಆ ಭಯವನ್ನು ತುಂಗಭದ್ರೆಯೇ ನಿವಾರಿಸುತ್ತಿದ್ದಾಳೆ.

Tags :