For the best experience, open
https://m.samyuktakarnataka.in
on your mobile browser.

ತುರ್ತು ಚಿಕಿತ್ಸೆ ವಾಹನದ ಮೇಲೆ ಸಿಎಂ ಭಾವಚಿತ್ರ, ಬಿಜೆಪಿ ಆಕ್ರೋಶ

12:15 AM Feb 06, 2024 IST | Samyukta Karnataka
ತುರ್ತು ಚಿಕಿತ್ಸೆ ವಾಹನದ ಮೇಲೆ ಸಿಎಂ ಭಾವಚಿತ್ರ  ಬಿಜೆಪಿ ಆಕ್ರೋಶ

ಬ್ಯಾಡಗಿ: ಪಟ್ಟಣದ ಪಶು ಆಸ್ಪತ್ರೆಯ ಸಂಚಾರಿ ತುರ್ತು ಚಿಕಿತ್ಸೆಯ ವಾಹನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕದೇ ಇರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಭಾವಚಿತ್ರಕ್ಕೆ ರೈತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಇಂದು ಸೆಗಣಿ ಎರಚಿ ಆಕ್ರೋಶ ವ್ಯಕ್ತಪಡಿಸಿದರು.
ಸಂಚಾರಿ ತುರ್ತುವಾಹನದಲ್ಲಿ ಮೋದಿಯವರ ಭಾವಚಿತ್ರವನ್ನು ತೆಗೆದು ಹಾಕಿ ಮುಖ್ಯಮಂತ್ರಿ ಹಾಗೂ ಪಶು ಸಂಗೋಪನಾ ಸಚಿವರ ಫೋಟೋಗಳನ್ನು ಹಾಕಲಾಗಿತ್ತು. ಇದನ್ನರಿತ ರೈತ ಮುಖಂಡ ಬಸವರಾಜ ಸಂಕಣ್ಣನವರ ಆಕ್ರೋಶಗೊಂಡು ಮೋದಿಯವರ ಫೋಟೋ ತೆಗೆದು ಹಾಕಿದಂತೆ ಸಿದ್ದರಾಮಯ್ಯ ಅವರ ಫೋಟೋ ತೆರವುಗೊಳಿಗೊಳಿಸಬೇಕೆಂದು ಆರೋಪಿಸಿದರು.
ದಿಢೀರನೆ ಆಗಮಿಸಿದ ರೈತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಇವರ ಜೊತೆ ಕೈಜೋಡಿಸಿ ಮೋದಿಯವರ ಭಾವಚಿತ್ರ ಇಲ್ಲದಿರುವುದನ್ನು ವಿರೋಧಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಪಶು ಸಂಗೋಪನೆ ಇಲಾಖೆಯ ವಾಹನಕ್ಕೆ ಅನುದಾನವನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ಆದರೆ ಪ್ರಸ್ತುತ ಮೋದಿಯವರ ಭಾವಚಿತ್ರವನ್ನು ಉದ್ದೇಶ ಪೂರ್ವಕವಾಗಿ ತೆಗೆದುಹಾಕಿ ಅವಮಾನ ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಬಸವರಾಜ ಸಂಕಣ್ಣನವರ ಆರೋಪಿಸಿದರು.