ತುಳಸಿಮತಿ ಮುರುಗೇಶನ್‌ಗೆ ಬೆಳ್ಳಿ ಪದಕ
09:46 PM Sep 02, 2024 IST
|
Samyukta Karnataka
ಪ್ಯಾರಿಸ್: ಪ್ಯಾರಾಲಿಂಪಿಕ್ಸ್ 2024ರಲ್ಲಿ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ಯು5 ಇವೆಂಟ್‌ನಲ್ಲಿ ಭಾರತದ ತುಳಸಿಮತಿ ಮುರುಗೇಶನ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಚೀನಾದ ಕ್ಯು ಕ್ಸಿಯಾ ಯಾಂಗ್ ವಿರುದ್ಧ 0-2(17-21, 10-21)ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಈ ಮೂಲಕ ಭಾರತ ಇದೇ ಮೊದಲ ಬಾರಿ ಒಂದೇ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಜಯಿಸಿದೆ.
Next Article