ತೆರವು ಕಾರ್ಯ: ಸಂಚಾರಕ್ಕೆ ಪರ್ಯಾಯ ಮಾರ್ಗ
ಬಳ್ಳಾರಿ: ನಗರದ ಸುಧಾ ಕ್ರಾಸ್ ವೃತ್ತ ಹತ್ತಿರದ ರೈಲ್ವೆ ಗೇಟ್‍ನ ರಸ್ತೆ ಬದಿ ಬೆಳೆದಿರುವ ಗಿಡ-ಮರ ಮತ್ತು ವಿದ್ಯುತ್ ಕಂಬ ತೆರವುಗೊಳಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಜು. 21ರಂದು ಬೆಳಿಗ್ಗೆ 4ಗಂಟೆಯಿಂದ ಸಂಜೆ 9ಗಂಟೆಯವರೆಗೆ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗವಾಗಿ ಸಂಚರಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಬದಲಿ ಮಾರ್ಗ: ಎಸ್‍ಪಿ(ವಾಲ್ಮೀಕಿ) ವೃತ್ತದಿಂದ ಓಪಿಡಿ ವೃತ್ತ, ಸುಧಾ ಕ್ರಾಸ್ ವೃತ್ತದ ಹತ್ತಿರ ರೈಲ್ವೆ ಗೇಟ್‍ನ ರಸ್ತೆಯ ಮುಖಾಂತರ ಸಂಚರಿಸುವ ಎಲ್ಲಾ ವಾಹನಗಳು ಓಪಿಡಿ ವೃತ್ತ, ಪೋಲಾ ಪ್ಯಾರಡೈಸ್ ಮುಖಾಂತರ ಮತ್ತು 2ನೇ ರೈಲ್ವೆ ಗೇಟ್ ರೇಡಿಯೋ ಪಾರ್ಕ್‍ದಿಂದ ಐಟಿಐ ಕಾಲೇಜು, ಎಂಆರ್‌ಕೆ ಫಂಕ್ಷನ್ ಹಾಲ್, ಆರ್‌ಟಿಓ ಕಚೇರಿ ರಸ್ತೆಯ ಮುಂಭಾಗದಿಂದ ಸುಧಾಕ್ರಾಸ್(ಹೊಸಪೇಟೆ ರಸ್ತೆ) ಮಾರ್ಗವಾಗಿ ತಾತ್ಕಾಲಿಕವಾಗಿ ಸಂಚರಿಸಬಹುದು.
ಸುಧಾ ಕ್ರಾಸ್(ಹೊಸಪೇಟೆ ರಸ್ತೆ)ಗೆ ಬರುವ ವಾಹನಗಳನ್ನು ಆರ್‌ಟಿಓ ಕಚೇರಿಯ ರಸ್ತೆ ಮುಖಾಂತರ, 2ನೇ ರೈಲ್ವೆ ಗೇಟ್, 1ನೇ ರೈಲ್ವೆ ಗೇಟ್ ಓವರ್ ಬ್ರಿಡ್ಜ್ ಅಥವಾ ರಂಗಮಂದಿರ ಮುಖಾಂತರ ಸಂಚರಿಸಬಹುದು. ಮೋಟಾರು ವಾಹನ ಕಾಯ್ದೆ 1988ರ ಅಧಿನಿಯಮ 115ರ ಮತ್ತು ಅದರ ಅಡಿ ಬರುವ ಕರ್ನಾಟಕ ಮೋಟಾರು ವಾಹನ ನಿಯಮಾವಳಿ 1989 ನಿಯಮ 221(ಎ)(5) ರನ್ವಯ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.