ತೇರು ಎಳೆದು ಸಂಭ್ರಮಿಸಿದ ನಾರಿಯರು
ನರೇಗಲ್ಲ: ಸಮೀಪದ ಹಾಲಕೆರೆಯ ಶ್ರೀ ಗುರು ಅನ್ನದಾನ ಸ್ವಾಮೀಜಿಗಳ ೪೭ನೇ ಪುಣ್ಯಾಸ್ಮರಣೋತ್ಸವದ ನಿಮಿತ್ತ ಸೋಮವಾರ ಸಂಜೆ ಜರುಗಿದ ಬೆಳ್ಳಿ ರಥವನ್ನು ನಾರಿಯರು ಸಡಗರ ಸಂಭ್ರದಿಂದ ಎಳೆದು ಸಂಭ್ರಮಿಸಿದರು.
ಬೆಳ್ಳಿ ರಥೋತ್ಸವಕ್ಕೆ ಮಹಿಳಾ ಮತ್ಸತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಿಳೆಯರು ಆರತಿ, ನಂದಿ ಕೋಲ, ಕುಂಭ ಮೇಳದೊಂದಿಗೆ ಭಾಗವಹಿಸಿದ್ದರು. ಮಹಿಳೆಯರಿಂದ ಡೊಳ್ಳು ಕುಣಿತ, ಭಜನೆ ರಥೋತ್ಸವದ ಮೆರಗು ಹೆಚ್ಚಿಸಿದ್ದವು. ಭಕ್ತರು ಶ್ರೀ ಅನ್ನದಾನೇಶ್ವರ ಮಹಾರಾಜ್ ಕೀ ಜೈ, ಡಾ. ಅಭಿನವ ಅನ್ನದಾನೇಶ್ವರ ಮಹಾರಾಜ್ ಕೀ ಜೈ ಘೋಷಣೆ ಕೂಗಿದರು. ಸಹಸ್ರಾರು ಮಹಿಳೆಯರು ಬೆಳ್ಳಿ ರಥ ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದರು.
ಈವೇಳೆ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ನಿಲಗುಂದ ಪ್ರಭುಲಿಂಗ ಸ್ವಾಮೀಜಿ, ಮುಪ್ಪಿನ ಬಸವಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯರು, ಖೇಳಗಿಯ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸದಾಶಿವ ದೇವರು, ಕುರಗೋಡ ನಾಗಲಾಪೂರ ವಿರಕ್ತಮಠದ ಪರ್ವತ ದೇವರು. ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡೆ ವಿರಕ್ತಮಠದ ಮರಿಕೊಟ್ಟೂರ ದೇವರು ನೇತೃತ್ವ ವಹಿಸಿದ್ದರು. ಅಕ್ಕನಬಳಗದ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ, ಪಿಎಸ್‌ಐ ಐಶ್ವರ್ಯ ನಾಗರಾಳ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಕದರಿ ಶ್ರೀರೀಕಾ, ವೀಣಾ ಪಾಟೀಲ ಸೇರಿದಂತೆ ನರೇಗಲ್ಲ ಜಕ್ಕಲಿ, ಅಬ್ಬಿಗೇರಿ, ಮಾರನಬಸರಿ, ನಿಡಗುಂದಿಕೊಪ್ಪ, ನಿಡಗುಂದಿ, ಗದಗ ಧಾರವಾಡ, ಬಳ್ಳಾರಿ, ರಾಯಚೂರ, ಬಾಗಲಕೋಟ, ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.