ದಕ್ಷಿಣದ ಜಿಲ್ಲೆಗಳಿಗೆ ಕೃಷ್ಣೆ ನೀರು: ಎಚ್‌ಡಿಡಿ ಹೇಳಿಕೆಗೆ ಎಸ್ಸಾರ್ ನಿಗಿ ಕೆಂಡ..!
07:17 PM Apr 24, 2024 IST | Samyukta Karnataka
ಬಾಗಲಕೋಟೆ: ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೀಡಿರುವ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಅಂಥ ಯೋಜನೆ ಜಾರಿಗೆ ಮುಂದಾದರೆ ಕೃಷ್ಣಾ ನದಿ ಸಂತ್ರಸ್ತರ ಹೆಣದ ಮೇಲೆ ನೀವು ನೀರು ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಖಾರವಾಗಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಯುಕೆಪಿ ವಿಚಾರವಾಗಿ ಸುದಿರ್ಘವಾಗಿ ಮಾತನಾಡಿದ ಅವರು, ನ್ಯಾ.ಬ್ರಿಜೇಶ್‌ಕುಮಾರ್ ಆಯೋಗದ ತರ‍್ಪಿನಂತೆ ೧೩೦ ಟಿಎಂಸಿ ನೀರು ಬಳಕೆ ಮಾಡಿಕೊಂಡರೆ ಉತ್ತರ ಕರ್ನಾಟಕದ ಜನರ ಬದುಕು ಬಂಗಾರವಾಗಲಿದೆ. ಆದರೆ ಈ ಬಗ್ಗೆ ವ್ಯಾಪಕವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ. ಇಂಥದ್ರದಲ್ಲಿ ಇರುವ ನೀರನ್ನೂ ದಕ್ಷಿಣ ಕರ್ನಾಟಕಕ್ಕೆ ಹರಿಸುವ ಮಾತುಗಳನ್ನು ಮಾಜಿ ಪ್ರಧಾನಿಗಳು ಆಡಿರುವಾಗ ಈ ಮಾತನ್ನೂ ನಾವು ಗಂಭೀರವಾಗಿ ಸ್ವೀಕರಿಸದಿದ್ದರೆ ಮುಂದೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದರು.