For the best experience, open
https://m.samyuktakarnataka.in
on your mobile browser.

ಹಿಜಾಬ್ ನಿಷೇಧ ಹಿಂಪಡೆದರೆರಾಜ್ಯದ ಶಾಲೆಗಳು ಕೇಸರಿಮಯ

06:35 PM Dec 23, 2023 IST | Samyukta Karnataka
ಹಿಜಾಬ್ ನಿಷೇಧ ಹಿಂಪಡೆದರೆರಾಜ್ಯದ ಶಾಲೆಗಳು ಕೇಸರಿಮಯ

ಮಂಗಳೂರು: ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಹಿಜಾಬ್ ನಿಷೇಧ ಹಿಂಪಡೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್, ನಿಷೇಧ ಹಿಂಪಡೆದರೆ ರಾಜ್ಯದ ಎಲ್ಲಾ ಶಾಲೆಗಳು ಕೇಸರಿಮಯವಾಗಲಿದೆ ಎಂದು ಎಚ್ಚರಿಸಿದೆ.
ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿರುವ ಸಂದರ್ಭ ಅವರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದಿದ್ದಾರೆ.
ಹಿಜಾಬ್ ನಿಷೇಧ ವಿರೋಧಿಸಿ ಉಡುಪಿಯಲ್ಲಿ ಐದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಪಿಎಫ್‌ಐ, ಕ್ಯಾಂಪಸ್ ಫ್ರಂಟ್ ಸಂಘಟನೆ ಬೆಂಬಲ ನೀಡಿದ್ದವು
ಈಗ ಪಿಎಫ್‌ಐ ನಿಷೇಧ ಆಗಿದ್ದರೂ ಅವುಗಳ ಮಾನಸಿಕತೆ ಕಾಣಿಸಿಕೊಳ್ಳುತ್ತಿದೆ. ಸಿದ್ದರಾಮಯ್ಯನವರು ಹಿಜಾಬ್ ಧರಿಸಲು ಹೇಳಿರುವುದು ಪಿಎಫ್‌ಐ ಮಾನಸಿಕತೆ ತೋರಿಸುತ್ತದೆ. ಪಿಎಫ್‌ಐ ಬದಲು ಕಾಂಗ್ರೆಸ್ಸೇ ಆ ಜಾಗವನ್ನು ತುಂಬಿ ಪಿಎಫ್‌ಐ ದಾರಿಯಲ್ಲಿ ನಡೆಯುತ್ತಿದೆ.
ಮೊನ್ನೆ ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಅನುದಾನ ಕೊಡುತ್ತೇನೆ ಎಂದಿದ್ದ ಮುಖ್ಯಮಂತ್ರಿಯವರು ವೋಟಿಗಾರಿ ಮುಸ್ಲಿಮರನ್ನು ಮೆಚ್ಚಿಸಲು ಹೊರಟಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಎಂದವರು ಈಗ ಒಂದು ವರ್ಗದ ಪರ ನಿಂತಿದ್ದಾರೆ ಎಂದು ಟೀಕಿಸಿದರು.
ಹಿಜಾಬ್ ನಿಷೇಧ ಹಿಂಪಡೆಯುವುದು ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ ಎಂದಿದ್ದಾರೆ.