ದತ್ತಮಾಲೆ ಧರಿಸಿದ ಸಿ.ಟಿ.ರವಿ
ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ಹಮ್ಮಿಕೊಂಡಿ ರುವ ದತ್ತಜಯಂತಿ ಇಂದಿ ನಿಂದ ಚಾಲನೆ ಪಡೆದು ಕೊಂಡಿದ್ದು, ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಸಿ.ಟಿ.ರವಿ ಸೇರಿದಂತೆ ಇತರೆ ಮುಖಂಡರು ದತ್ತಮಾಲೆ ಧರಿಸಿದರು.
ದತ್ತ ಜಯಂತಿ ಹಿನ್ನಲೆಯಲ್ಲಿ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ದತ್ತಾತ್ರೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಜನೆ ನಡೆಸಲಾಯಿತು. ಬಳಿಕ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಮುಖಂಡರು, ಕಾರ್ಯಕರ್ತರು ದತ್ತಮಾ ಲಾಧಾರಣೆ ಮಾಡಿದರು.
ಬಳಿಕ ಸುದ್ದಿಗಾರೊಂದಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, 25 ವರ್ಷದ ದತ್ತಜಯಂತಿ ಅಭಿಯಾನಕ್ಕೆ ಇಂದಿನಿಂದ ಚಾಲನೆ ದೊರೆತಿದೆ. ಇದು ಭಕ್ತಿಯ ಮತ್ತು ಮುಕ್ತಿಯ ಹೋರಾಟವಾಗಿ ಜನಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದರು.
ರಾಜ್ಯದಲ್ಲಿ ವಕ್ಛ ಬೋರ್ಡ್ ಗಲಾಟೆಯಾಗುತ್ತಿದೆ. ಇದಕ್ಕೆ ಮೊದಲು ಬಲಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠ, ದತ್ತಾತ್ರೇಯ ದೇವರು. 1973_74ರಲ್ಲಿ ಗೆಜೆಟ್ ಮಾಡಬೇಕಾದರೇ ಮೂಲದಾಖಲೆಗಳನ್ನು ಪರಿಶೀಲಿಸದೇ ದತ್ತಾತ್ರೇಯ ಪೀಠವನ್ನು ವಕ್ಛ ಬೋರ್ಡ್ ಗೆ ಸೇರಿಸಿದ ಪರಿಣಾಮ ನಾವೂ ಅದನ್ನು ಉಳಿಸಿಕೊಳ್ಳಲು ಜನಾಂದೋಲನ ಮತ್ತು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಯಿತು ಎಂದರು.
ಜನಾಂದೋಲನಾವೂ ಸಾಕಷ್ಟು ಪರಿಣಾಮ ಬೀರಿದೆ. ನ್ಯಾಯಾಂಗ ಹೋರಾಟ ಅರ್ಧ ನ್ಯಾಯ ಕೊಟ್ಟಿದೆ. ಪೂರ್ಣ ನ್ಯಾಯಕ್ಕಾಗಿ ಹೋರಾಟ ಮುಂದೂವರೆಸುತ್ತೇವೆ. ಭಕ್ತಿ ಮತ್ತು ಶಕ್ತಿಯ ಆಂದೋಲನಾ ದತ್ತಪೀಠ ಮುಕ್ತಿಗಾಗಿ ಮೂದುವ ರೆಸುತ್ತೇವೆ ಎಂದರು.
ಬಾಂಗ್ಲಾ ದೇಶದ ಬೆಳವಣಿಗೆ ಗಮನಿಸಿದಾಗ ಇಸ್ಲಾಂ ಹೆಸರಿನಲ್ಲಿ ನಡೆದ ಕ್ರೌರ್ಯ, ನರಮೇಧ, ಸಂಸ್ಕೃತಿ ನಾಶಕ್ಕೆ ಸಾಕ್ಷಿ ಹುಡುಕಬೇಕಾದ ಅವಶ್ಯಕತೆ ಇಲ್ಲ. ಜಗತ್ತಿನ ಉದ್ದಗಲಾಕ್ಕೂ ಮತಾಂಧತೆ ವಿಸ್ತರಿಸಿರುವುದು ಸತ್ಯ. ಅವರದೇ ರೀತಿಯಲ್ಲಿ ನಾವು ಎದುರಿಸದಿದ್ದರೇ ಜಗತ್ತಿನ ಎಲ್ಲಾ ಸಂಸ್ಕೃತಿಗಳು ನಾಶವಾಗುತ್ತವೆ ಎಂದರು. ಈ ಸಂದರ್ಭದಲ್ಲಿ ರಘು ಸಕಲೇಶಪುರ,ಆಟೋ ಶಿವಣ್ಣ, ಶ್ಯಾಮ್ ವಿ.ಗೌಡ ಸೇರಿದಂತೆ ಅನೇಕರು ಇದ್ದರು.