For the best experience, open
https://m.samyuktakarnataka.in
on your mobile browser.

ದರೋಡೆ ಪ್ರಕರಣದಲ್ಲಿ ಹೆಡ್ ಕಾನ್ಸ್ ಟೇಬಲ್, ಹೋಂ ಗಾಡ್೯ ಅರೆಸ್ಟ್

01:12 PM Sep 21, 2024 IST | Samyukta Karnataka
ದರೋಡೆ ಪ್ರಕರಣದಲ್ಲಿ ಹೆಡ್ ಕಾನ್ಸ್ ಟೇಬಲ್  ಹೋಂ ಗಾಡ್೯ ಅರೆಸ್ಟ್

ಬಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸರ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆದಿದೆ. ದರೋಡೆ ಪ್ರಕರಣವೊಂದು ಭೇದಿಸಿ ಹೆಡ್ ಕಾನ್ಸ್ ಟೇಬಲ್ ಹೋಂ ಗಾಡ್೯ ಸಹಿತ ಏಳು ಜನ ಆರೋಪಗಳನ್ನು ಬಂಧಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ‌ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿ ಪೊಲೀಸನ ನೆರವಿನಲ್ಲಿ ನಡೆದ ದರೋಡೆ ಪ್ರಕರಣ ಬಯಲಿಗೆಳೆಯಲಾಗಿದ್ದು, ತಮ್ಮ ಇಲಾಖೆಯ ಸಿಬ್ಬಂದಿಯೇ ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ರು ಬಿಡದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ. ಬಳ್ಳಾರಿ ಎಸ್ಪಿ ಶೋಭಾರಾಣಿಯಿಂದ ಇಡೀ ಬಳ್ಳಾರಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಕಳ್ಳರ ಜೊತೆಗೆ ಸೇರಿಕೊಂಡು ಪೊಲೀಸಪ್ಪ ಡಾಕಾಯಿತಿ ಮಾಡಿರೋ ಪ್ರಕರಣ ಬಯಲಿಗೆಳೆದ ಎಸ್ಪಿ ಶೋಭಾ ರಾಣಿ, ಬ್ರೂಸ್ ಪೇಟೆ ಪೋಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಹಾಗೂ ಹೋಂ‌ ಗಾರ್ಡ್ ನಿಂದ ಲಕ್ಷ ಲಕ್ಷ ಹಣ ಜಪ್ತಿ ಮಾಡಿಕೊಂಡಿದ್ದಾರೆ.

ಏನಿದು ಪ್ರಕರಣ: ರಘು ಎನ್ನುವ ಬಂಗಾರ ಅಂಗಡಿ ಮಾಲೀಕ ‌ಕಳೆದ 12ನೇ ತಾರೀಖು ಬೆಳಿಗಿನ ಜಾವ ಬೈಕ್ ಮೇಲೆ 22 ಲಕ್ಷ 99 ಸಾವಿರ ನಗದು ಮತ್ತು 318 ಗ್ರಾಂ ಬಂಗಾರ ತೆಗೆದುಕೊಂಡು ಹೋಗುತ್ತಿದ್ದರು. ಆಂಧ್ರ ಗಡಿಯ ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗ್ತಿರುವಾಗ ಅವರಿಗೆ ಕಣ್ಣಿಗೆ ಕಾರದ ಪುಡಿ ಎರಚಿ ಹಣ ಒಡೆವೆ ದರೋಡೆ ಮಾಡಲಾಗಿತ್ತು. ಪ್ರಮುಖ ಆರೋಪಿ ತೌಸೀಫ್ ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕ್ ಅಲಿ ರೆಹಮಾನ್, ಆರೀಫ್ ಖರೀಮರಿದ ಸಿನಿಮೀಯ ರೀತಿ ದರೋಡೆ‌ ಮಾಡಿದ್ದರು. ಈ ಕಳ್ಳರು ಸೆರೆ ಸಿಕ್ಕಾಗ ಈ ಕಳ್ಳತನಕ್ಕೆ ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸಟೇಬಲ್ ಸಾಥ್ ನೀಡಿದ್ದ ಸತ್ಯ ತನಿಖೆ ವೇಳೆ ಬಯಲಾಗಿತ್ತು. ಹೆಡ್ ಕಾನ್ಸಟೇಬಲ್ ಮಹಬೂಬ್ ಪಾಷ ಮತ್ತು ಪ್ರಮುಖ ಆರೋಪಿ ಆರೀಫ್ ಆತ್ಮೀಯ ಗೆಳೆಯರಾಗಿದ್ರು. ಆ ಸಲುಗೆಯಿಂದಲೇ ದರೋಡೆ ಮಾಡುವ ಪ್ಲಾನ್ ಮಾಡಲಾಗಿತ್ತು. ಆರೋಪಿಗಳನ್ನು ಬಂಧಿಸಿದಾಗ ಹೆಡ್ ಕಾನ್ಸಟೇಬಲ್ ಪಾತ್ರ ಇರೋದು ಬಯಲಿಗೆ ಬಂದಿದೆ. ದರೋಡೆ ಹಣದಲ್ಲಿ ಹೆಡ್ ಕಾನ್ಸಟೇಬಲ್ ಮೆಹಬೂಬ್ ಒಂಭತ್ತು ಲಕ್ಷ ಹಣವನ್ನು ಪಡೆದಿದ್ದಾರೆ. ಸದ್ಯ15 ಲಕ್ಷ 91ಸಾವಿರ ನಗದು, 116 ಗ್ರಾಂ ರಿಕವರಿ ಮಾಡಲಾಗಿದೆ. ಪ್ರಮುಖ ಆರೋಪಿ ಆರೀಫ್ ಮತ್ತು ಹೆಡ್ ಕಾನ್ಸಟೇಬಲ್ ಮೆಹಬೂಬ್ ಸೇರಿ ಏಳು ಜನರ ಖದೀಮರು ಅರೆಸ್ಟ್ ಮಾಡಿದ್ದಾರೆ. ಆರೀಪ್ ಈ ಮೊದಲು ಹೋಮ್ ಗಾರ್ಡ್ ಕೆಲಸ ಮಾಡ್ತಿರುತ್ತಾರೆ, ಹೀಗಾಗಿ ಇಬ್ಬರ ಮಧ್ಯೆ ಗೆಳೆತನ ಇರುತ್ತಾರೆ.
ಹೆಡ್ ಕಾನ್ಸಟೇಬಲ್ ಮೆಹಬೂಬ್ ಪಾಷ ಅಮಾನತ್ತು ಮಾಡಿದ್ದಷ್ಟೇ ಅಲ್ಲದೇ ಬಂಧಿಸಲಾಗಿದೆ.

Tags :