ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದಸರಾ ಧರ್ಮ ಸಮ್ಮೇಳನದಲ್ಲಿ ರೈತರಿಗಾಗಿ ಕೃಷಿಮೇಳ

04:10 PM Oct 09, 2024 IST | Samyukta Karnataka

ನರೇಗಲ್ಲ : ಸಮೀಪದ ಅಬ್ಬಿಗೇರಿಯಲ್ಲಿ ನಡೆದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ರೋಣ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರಿಗಾಗಿ ಕೃಷಿಮೇಳವನ್ನು ಯಡೆಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಈವೇಳೆ ಸಿದ್ದರಬೆಟ್ಟ, ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೃಷಿ ಪ್ರಧಾನವಾಗಿರುವ ಈ ಭಾಗದ ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ಹಾಗೂ ವಿನೂತನ ಯಂತ್ರೋಪಕರಣಗಳ ಬಗ್ಗೆ ಮಾಹಿತಿಗಾಗಿ ದಸರಾ ಧರ್ಮ ಸಮ್ಮೇಳನದಲ್ಲಿ ಕೃಷಿಮೇಳ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಇಳುವರಿ ಪಡೆಯಬೇಕೆಂಬ ಉದ್ದೇಶ ಹಾಗೂ ಗೊಬ್ಬರ, ಕೀಟನಾಶಕ ಇನ್ನಿತರ ವಿಷಕಾರಿ ರಾಸಾಯನಿಕಗಳನ್ನು ಕೃಷಿ ಬೆಳೆಗಳಿಗೆ ಬಳಕೆ ಮಾಡುತ್ತಿರುವುದರಿಂದ ಸತ್ವಹೀನ ಕೃಷಿ ಉತ್ಪನ್ನಗಳು ಮನುಷ್ಯನ ಅನೇಕ ರೋಗಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಸಿರಿಧಾನ್ಯ ಬೆಳೆದು ತಿನ್ನುವುದರ ಮುಖಾಂತರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಎಲ್ಲ ರೈತರು ಕೃಷಿಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರೋಣ ಕೃಷಿ ಇಲಾಖೆ ಸಹಾಯಕ ಉಪನಿರ್ದೇಕ ರವಿಂದ್ರಗೌಡ ಪಾಟೀಲ ಮಾತನಾಡಿ, ಬೇಳೆ ಕಾಳು, ಎಣ್ಣೆಕಾಳು, ಕಿರುಧಾನ್ಯ, ತರಕಾರಿ, ಹಣ್ಣು ಮೊದಲಾದವುಗಳ ಮೌಲ್ಯವರ್ಧನೆ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು. ನ್ಯಾನೋ ಯುರಿಯಾ, ನ್ಯಾನೊ ಡಿಎಪಿ ಬಳಕೆ ಮಾಡಬೇಕು. ಯಾವುದೇ ಬೆಳೆ ಬಿತ್ತುವ ಮುನ್ನ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಅಂದರೆ ಬೆಳೆಗೆ ರೋಗ ಅಂಟುವಿಕೆ ಅಡಿಮೆ ಆಗುತ್ತದೆ. ಸಿರಿಧಾನ್ಯದಿಂದ ರೋಗ ಮುಕ್ತರಾಗಲು ಸಾಧ್ಯ ಎಂದರು.

ತಂಡೊಪ ತಂಡವಾಗಿ ಕೃಷಿಮೇಳಕ್ಕೆ ಬಂದ ರೈತರು : ಅಬ್ಬಿಗೇರಿ ಕೃಷಿಮೇಳದಲ್ಲಿ ೧೫ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ ವಸ್ತುಗಳ ಪ್ರದರ್ಶನ, ಟ್ಯ್ರಾಕ್ಟರ್, ರುಟುವೆಟರ್, ಬಿತ್ತವ ಕೂರಿಗೆ, ನೆಗಿಲು, ಸ್ಪಿಂಕ್ಲರ್ ಪೈಪ್, ಹೊಸ ತಳಿಯ ಬಿತ್ತನೆ ಬೀಜಗಳ ಪ್ರದರ್ಶನ, ಸೇರಿದಂತೆ ಹಲವಾರು ಕೃಷಿ ಉಪಕರಣಗಳನ್ನು ವಿಕ್ಷಿಸಲು ರೈತರು ತಂಡೊಪ ತಂಡವಾಗಿ ಆಗಮಿಸಿ ಮಾಹಿತಿ ಪಡೆದರು.

ಈ ವೇಳೆ ರೋಣ ಕೃಷಿ ಇಲಾಖೆ ಉಪನಿರ್ದೇಶಕ ಪಾಲಕ್‌ಗೌಡ, ಕೃಷಿ ಅಧಿಕಾರಿಗಳಾದ ಸಾವಿತ್ರಿ ಶಿವನಗೌಡ, ಬಸವರಾಜ, ಸಿ.ಕೆ ಕಮ್ಮಾರ, ಶಿವಪುತ್ರಪ್ಪ ದೊಡ್ಡಮನಿ, ಮಂಜುನಾಥ ಬಿಳಗಿ, ಶಿವಾನಂದ ಅರಣುಶಿ, ಬಸವರಾಜ ಪಲ್ಲೇದ, ಎಂ.ಎಸ್ ಧಡೇಸೂಪಮಠ, ಸುರೇಶ ನಾಯ್ಕರ್, ಸಂಗಪ್ಪ ಕುಂಬಾರ, ಮಂಜುನಾಥ ಅಂಗಡಿ, ಸುರೇಶ ಬಸವರಡ್ಡೆರ, ಪ್ರಕಾಶ ಜಕರಡ್ಡಿ ಸೇರಿದಂತೆ ಸುತ್ತಮುತ್ತಲಿನ ರೈತರು ಭಾವಹಿಸಿದ್ದರು.

Next Article