ದಾನ ಮಾಡಿರುವವರ ದಾಖಲೆ ಹಾಗೂ ಮಾಹಿತಿ ಇದೆಯಾ ?
12 ನೇ ಶತಮಾನದಲ್ಲಿ ಬಂದ ದಾನವನ್ನು, 19 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ವಕ್ಫ್ ಸಂಸ್ಥೆ ನಮ್ಮದು ಅಂತ ಕೇಳುವುದರಲ್ಲಿ ಏನಾದರೂ ತರ್ಕವಿದೆಯೇ ?
ಬೆಂಗಳೂರು: ಅನೇಕ ಜಿಲ್ಲೆಗಳಲ್ಲಿ ವಕ್ಫ್ ರೈತರಿಗೆ, ಭೂ ಮಾಲೀಕರಿಗೆ ನೋಟೀಸ್ ನೀಡದೆ ಪಹಣಿಯಲ್ಲಿ ಸದ್ದಿಲ್ಲದೇ ಹೆಸರನ್ನು ಬದಲಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಈ ಕುರಿತಂತೆ ಎಂ.ಬಿ.ಪಾಟೀಲರೇ, ಅವರಿಗೆ ಸಾಮಾಜಿ ಕ ಜಾಲತಾಣದಲ್ಲಿ ಸರಣಿ ಪ್ರಶ್ನೆ ಮಾಡಿ ಪೋಸ್ಟ್ ಮಾಡಿದ್ದಾರೆ, ಅತ್ಯಂತ ದುರ್ಭರ ಕಾನೂನಾದ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಜಂಟಿ ಸಂಸತ್ ಸಮಿತಿ ರಚನೆ ಆದಮೇಲೆ ರೈತರ, ದೇವಸ್ಥಾನಗಳ, ಮಠಗಳು ವಕ್ಫ್ ಆಸ್ತಿ ಅಂತ ಹೇಳುತ್ತಿದೆ, ಅದೇಕೆ ಇಷ್ಟೊಂದು ಅವಸರ ? ಇಷ್ಟು ದಿನ ಮಂಕಾಗಿದ್ದ ವಕ್ಫ್ ಈಗ ಧುತ್ತನೆ ನೋಟೀಸು, ಇಂಡೀಕರಣ ಮಾಡುವ ಉದ್ದೇಶವೇನು, ಇದು ಕೇವಲ ನಮ್ಮ ವಿಜಯಪುರಕ್ಕೆ ಸೀಮಿತವಾಗಿಲ್ಲ. ಕೋಲಾರ, ಮಂಡ್ಯ, ಯಾದಗಿರಿ, ಬೀದರ್, ಕಲ್ಬುರ್ಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಕ್ಫ್ ರೈತರಿಗೆ, ಭೂ ಮಾಲೀಕರಿಗೆ ನೋಟೀಸ್ ನೀಡದೆ ಪಹಣಿಯಲ್ಲಿ ಸದ್ದಿಲ್ಲದೇ ಹೆಸರನ್ನು ಬದಲಿಸಿದೆ, ಪಾಟೀಲರೇ, ವಿರಕ್ತ ಮಠ, ಸೋಮೇಶ್ವರ ದೇವಸ್ಥಾನ ಇವೆಲ್ಲವೂ ಶತ ಶತ ಮಾನಗಳ ಹಿಂದೆಯೇ ಚಾಲುಕ್ಯರು, ರಾಣಿ ಅಬ್ಬಕ್ಕ ದಾನ ಕೊಟ್ಟಿದ್ದ ಜಾಗ. ಬಸವಣ್ಣವರ ಕಾಲದಲ್ಲಿ ಅಂದರೆ 12 ನೇ ಶತಮಾನದಲ್ಲಿ ವಿರಕ್ತ ಮಠಕ್ಕೆ ದಾನ ಬಂದಿದೆ. 12 ನೇ ಶತಮಾನದಲ್ಲಿ ಬಂದ ದಾನವನ್ನು, 19 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ವಕ್ಫ್ ಸಂಸ್ಥೆ ನಮ್ಮದು ಅಂತ ಕೇಳುವುದರಲ್ಲಿ ಏನಾದರೂ ತರ್ಕವಿದೆಯೇ ? ವಕ್ಫ್ ಸಚಿವ ವಕ್ಫ್ ಅದಾಲತ್ ನಡೆಸಿದ ಮೇಲೆ ರಾಜ್ಯಾದ್ಯಂತ ವಕ್ಫ್ ಮಂಡಳಿ ಕಾರ್ಯಪ್ರವೃತ್ತವಾಗಿ ಪಹಣಿಯಲ್ಲಿ ವಕ್ಫ್ ಎಂದು ದಾಖಲೆ ಮಾಡುತ್ತಿದೆ. ಅಷ್ಟಕ್ಕೂ ವಕ್ಫ್ ಮಂಡಳಿಗೆ ಹಿಂದೂ ದೇವಾಲಯಗಳೇ ಏಕೆ ಗುರಿ ಎಂದು ತಿಳಿಸಬೇಕು. ರೈತರ ಪಹಣಿಯಿಂದ ಮಾತ್ರ ವಕ್ಫ್ ಹೆಸರು ತೆಗೆದು ಹಾಕುತ್ತೇವೆ ಎಂದು ಡಿ.ಸಿ. ಹೇಳಿದ್ದಾರೆ, ಆದರೆ ಮಹಾಂತೇಶ ಮಠ, ವಿರಕ್ತ ಮಠ, ಸೋಮೇಶ್ವರ ದೇವಸ್ಥಾನ,ಸಾವಿರಾರು ವರ್ಷಗಳಿಂದ ಕುರುಬರ ಆರಾಧ್ಯ ದೈವವಾಗಿರುವ ಬೀರದೇವರ ಗುಡಿಯನ್ನೆ ವಕ್ಫ್ ಆಸ್ತಿ ಅಂತ ಹೇಳುತ್ತಿದ್ದರಲ್ಲ ಇದನ್ನು ದೇವಸ್ಥಾನಕ್ಕೆ ದಾನ ಮಾಡಿರುವವರ ದಾಖಲೆ ಹಾಗೂ ಮಾಹಿತಿ ಇದೆಯಾ ? ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ನಿವಾಸಿಯಾಗಿರುವ ಶ್ರೀಮತಿ ಶಾಮಲಾಬಾಯಿ ಮಾಲಿಪಾಟೀಲ್ ಸರ್ವೆ ನಂ 4* ಒಟ್ಟು 11 ಎಕರೆ ಜಮೀನ ಪಹಣಿಯಲ್ಲಿ ವಕ್ಫ ಆಸ್ತಿ ಆಗಿದೆ. ಇದನ್ನು ಯಾರು ಟಿಪ್ಪು ಸುಲ್ತಾನ ಅಥವಾ ಹೈದರ್ ದಾನ ಮಾಡಿದ್ದ ? ಅತ್ತೆ ಸೀರೆನ ಅಳಿಯ ದಾನ ಮಾಡಿದ ಹಾಗೆ ವಕ್ಫ್‌ನವರು ರೈತರ ಜಮೀನನ್ನು ನಮಗೆ ಯಾರೋ ದಾನ ಕೊಟ್ಟರು ಅನ್ನುವುದಕ್ಕೆ ತರ್ಕವೇ ಇಲ್ಲ. ಸ್ವಯಾರ್ಜಿತವಾಗಿ ದುಡಿದು ಸಂಪಾದನೆ ಮಾಡಿದ ಭೂಮಿ ಅಥವಾ ವಂಶ ಪಾರಂಪರ್ಯವಾಗಿ ಬಂದರೆ ಮಾತ್ರ ದಾನ ಮಾಡಬಹುದು ವಿನಃ ಸಿಕ್ಕ ಸಿಕ್ಕ ಜಮೀನನ್ನು ನಕ್ಷೆಯಲ್ಲಿ ತೋರಿಸಿ ಇದು ವಕ್ಫ್ ನಮ್ಮ ದೇವರಿಗೆ ಸೇರಿದ್ದು ಅನ್ನೋದು ಹಾಸ್ಯಾಸ್ಪದ ಹಾಗೂ ಮೂರ್ಖತನ ಎಂದಿದ್ದಾರೆ.