ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದಿನಾ ಮಾತಾಡಿದರೆ ತಿಂಗಳಿಗೆ ಹತ್ತು ಸಾವಿರ ರೂ. ಕೊಡುತ್ತೇನೆ

11:00 PM Sep 06, 2024 IST | Samyukta Karnataka

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಆರೋಪ ಪಟ್ಟಿಯಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನಮೂದಿಸಿದ್ದಾರೆ. ರೇಣುಕಾ ಸ್ವಾಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದಿದ್ದ ಮೊಬೈಲ್ ಸಂದೇಶದ ವಿವರಗಳನ್ನು ಸಹ ಆರೋಪ ಪಟ್ಟಿಯಲ್ಲಿ ವಿವರವಾಗಿ ಉಲ್ಲೇಖ ಮಾಡಲಾಗಿದೆ. ಪವಿತ್ರಾ ಗೌಡ ಹಾಗೂ ಪವನ್, ಹೇಗೆ ರೇಣುಕಾ ಸ್ವಾಮಿ ಜೊತೆ ಮಾತನಾಡಿ, ಆತನನ್ನು ಬಲೆಗೆ ಕೆಡವಿದರು ಎಂಬುದು ಚಾಟ್‌ನಿಂದ ತಿಳಿದು ಬರುತ್ತಿದೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್‌ಸ್ಟಾಗ್ರಾಂ ಸಂದೇಶಗಳು
ಮೊದಲು ಸಂದೇಶ ಕಳಿಸಿದ್ದನ್ನು ಪವಿತ್ರಾಗೌಡ ಆರೋಪಿ ಪವನ್‌ಗೆ ತಿಳಿಸಿ ಹೇಗಾದರೂ ಮಾಡಿ ಇವನನ್ನು ಹಿಡಿಯಬೇಕು ಅಂದಾಗ ಪವನ್ ಪವಿತ್ರಾಗೌಡ ಹೆಸರಿನಲ್ಲಿ ರೇಣುಕಾಸ್ವಾಮಿಗೆ ಉತ್ತರ ನೀಡುತ್ತಿದ್ದ. ಆದರೆ ಅದು ಸ್ವಾಮಿಗೆ ಗೊತ್ತಿರಲಿಲ್ಲ. ಪೊಲೀಸರಿಗೆ ದೊರೆತ ಸಂದೇಶಗಳು.
ರೇಣುಕಾಸ್ವಾಮಿ- ಹಾಯ್ ಕಣೆ
ಪವಿತ್ರಾಗೌಡ - ಹಾಯ್
ರೇಣುಕಾಸ್ವಾಮಿ- ನಿನ್ನ ಬ್ಯೂಟಿಗೆ ಸೋತು ಹೋಗಿದ್ದೇನೆ ಕಣೆ
ಪವಿತ್ರಾಗೌಡ- ಹೂಂ
ರೇಣುಕಾಸ್ವಾಮಿ- ನಿನ್ನ ಫೋಟೋ ಸೆಂಡ್ ಮಾಡು ಪ್ಲೀಸ್
ಪವಿತ್ರಾಗೌಡ- ಯಾಕೆ?
ರೇಣುಕಾಗೌಡ ನಿನ್ನ ಮೊಬೈಲ್ ನಂ ಕೊಡು ಕಣೇ
ಪವಿತ್ರಾಗೌಡ- ೯೫೩೫೨*** ನಂಬರ್ ತಗೋ ಪ್ಲೀಸ್ ಕಾಲ್ ಆನ್ ದಿಸ್
ರೇಣುಕಾಸ್ವಾಮಿ- ಮಾಡುತ್ತೇನೆ
ಪವಿತ್ರಾಗೌಡ - ನೀನು ಎಲ್ಲಿದಿಯಾ?
ರೇಣುಕಾಸ್ವಾಮಿ- ನಾನು ದುರ್ಗದವನು..ಡ್ಯೂಟಿಯಲ್ಲಿದ್ದೇನೆ
ಪವಿತ್ರಾಗೌಡ- ನನಗೇಕೋ ಡೌಟು ಫೋಟೊ ಸೆಂಡ್ ಮಾಡು
ರೇಣುಕಾಸ್ವಾಮಿ- ತಗೋ ನನ್ನ ಫೋಟೋ
ಪವಿತ್ರಾಗೌಡ- ಓಕೆ
ರೇಣುಕಾಸ್ವಾಮಿ- ನನ್ನ ಜತೆ ದಿನಾ ಮಾತಾಡು ಮಂತ್ಲಿ ಹತ್ತು ಸಾವಿರ ರೂ ಕೊಡುತ್ತೇನೆ.
ಪವಿತ್ರಾಗೌಡ- ನೀನು ಯಾವಾಗ
ಬೆಂಗಳೂರಿಗೆ ಬರ್ತಿಯಾ
ರೇಣುಕಾಸ್ವಾಮಿ- ನಿನಗೋಸ್ಕರ ಬರ್ತೀನಿ ಕಣೆ..
ಪವಿತ್ರಾಗೌಡ - ನಾಳೆ ಬರ್ತಿಯಾ?
ರೇಣುಕಾಸ್ವಾಮಿ- ನಾಳೆ ಆಗಲ್ಲ ಕೋರ್ಟ್ ಇದೆ
ಪವಿತ್ರಾಗೌಡ- ಎಂತಕ್ಕೆ ಕೋರ್ಟು
ರೇಣುಕಾಸ್ವಾಮಿ- ಬಜರಂಗದಳದ್ದು
ಪವಿತ್ರಾಗೌಡ- ಓಕೆ…
ಜೂನ್ ೭ ರಂದು ನ್ಯಾಯಾಲಯಕ್ಕೆ ತೆರಳಿದ್ದ ರೇಣುಕಾಸ್ವಾಮಿಯನ್ನು ಅಲ್ಲಿಂದಲೇ ಅಪಹರಿಸುವ ಯೋಜನೆ ಇತ್ತು. ಅವತ್ತು ಸಾಧ್ಯವಾಗಲಿಲ್ಲ. ಮರುದಿನ ಜೂನ್ ೮ ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಲಾಗಿತ್ತು.

Next Article