ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೀಪಾವಳಿ ಹಬ್ಬಕ್ಕಾಗಿ ವಿಶೇಷ ರೈಲು

11:15 AM Oct 21, 2024 IST | Samyukta Karnataka

ಬೆಂಗಳೂರು: ದೀಪಾವಳಿ ಹಬ್ಬದ ಸಂರ್ಭದಲ್ಲಿ ಜನತೆಯ ಸುಗಮ ಪ್ರಯಾಣಕ್ಕಾಗಿ ಹುಬ್ಬಳ್ಳಿ-ಮಂಗಳೂರು ಹಾಗೂ ಬೆಂಗಳೂರು -ಚೆನ್ನೈ ನಡುವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರಕ್ಕಾಗಿ, ಜನತೆಯ ಸುಗಮ ಪ್ರಯಾಣಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ರೈಲುಗಳು :
1) ಹುಬ್ಬಳ್ಳಿ - ಮಂಗಳೂರು ಜಂ. ವಿಶೇಷ ರೈಲು (ರೈಲು ಸಂಖ್ಯೆ 07311/07312) ಈ ರೈಲು ದಿನಾಂಕ 02/11/2024 ರಂದು ಸಂಜೆ 4.00 ಗಂಟೆಗೆ ಹುಬ್ಬಳ್ಳಿಯಿ೦ದ ಹೊರಟು ಮರುದಿನ ಬೆಳಿಗ್ಗೆ 11.45 ಕ್ಕೆ ಮಂಗಳೂರು ತಲುಪಲಿದೆ.
ದಿನಾಂಕ 03/11/2024 ರಂದು ಮಧ್ಯಾಹ್ನ 01.00 ಗಂಟೆಗೆ ಮರುಪ್ರಯಾಣ ಬೆಳೆಸಿ ಮರುದಿನ ಬೆಳಿಗ್ಗೆ 07.00 ಗಂಟೆಗೆ ಬೆಂಗಳೂರು ತಲುಪಲಿದೆ.
2) ಬೆಂಗಳೂರು - ಚೆನ್ನೈ ಸೂಪರ್ ಫಾಸ್ಟ್ ವಿಶೇಷ ರೈಲು (ರೈಲು ಸಂಖ್ಯೆ 06209/06210) ಈ ವಿಶೇಷ ರೈಲು ದಿನಾಂಕ 30/10/2024 ರಂದು ಬೆಳಿಗ್ಗೆ 08.05 ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 02.30 ಕ್ಕೆ ಚೆನ್ನೈ ತಲುಪಲಿದೆ. ಮರಳಿ 03.55 ಕ್ಕೆ ಚೆನ್ನೈನಿಂದ ಹೊರಟು ರಾತ್ರಿ 10.50 ಕ್ಕೆ ಬೆಂಗಳೂರು ತಲುಪಲಿದೆ. ಈ ರೈಲುಗಳ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಿ. ನೀವೆಲ್ಲರೂ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Tags :
#ಬೆಂಗಳೂರು#ಮಂಗಳೂರು#ರೈಲು#ಹುಬ್ಬಳ್ಳಿ
Next Article