ದೀಪಾವಳಿ ಹಬ್ಬಕ್ಕೆ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ
ಹುಬ್ಬಳ್ಳಿ : ದೀಪಾವಳಿ ಹಬ್ಬದಲ್ಲಿ ನಿರೀಕ್ಷಿತ ಪ್ರಯಾಣಿಕರ ದಟ್ಟಣೆಯನ್ನು ತೆರವುಗೊಳಿಸಲು, ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಉತ್ತರಾಖಂಡ ರಾಜ್ಯದ ಯೋಗ ನಗರಿ ಋಷಿಕೇಶ ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ -ರಾಜ್ಯಸ್ಥಾನದ ಭಗತ್-ಕಿ-ಕೋಠಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ.
ಅವುಗಳ ವಿವರ ಈ ಕೆಳಗಿನಂತಿವೆ:
ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ನಿಲ್ದಾಣಗಳ ನಡುವೆ ೪ ಟ್ರಿಪ್ ವಿಶೇಷ ರೈಲು ಸೇವೆ:
ರೈಲು ಸಂಖ್ಯೆ ೦೭೩೬೩ ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ ೧೪ ರಿಂದ ನವೆಂಬರ್ ೪ ರವರೆಗೆ ಪ್ರತಿ ಸೋಮವಾರ ಎಸ್‌ಸ್‌ಎಸ್ ಹುಬ್ಬಳ್ಳಿಯಿಂದ ೨೦:೩೦ ಗಂಟೆಗೆ ಹೊರಟು, ಬುಧವಾರ ೨೩:೩೦ ಗಂಟೆಗೆ ಯೋಗ ನಗರಿ ಋಷಿಕೇಶ ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ ೦೭೩೬೪ ಯೋಗ ನಗರಿ ಋಷಿಕೇಶ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಅಕ್ಟೋಬರ್ ೧೭ ರಿಂದ ನವೆಂಬರ್ ೭ ರವರೆಗೆ ಪ್ರತಿ ಗುರುವಾರ ೦೬:೧೫ ಗಂಟೆಗೆ ಯೋಗ ನಗರಿ ಋಷಿಕೇಶ ನಿಲ್ದಾಣದಿಂದ ಹೊರಟು, ಶನಿವಾರ ೦೬:೩೦ ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ರೈಲು ಎರಡು ದಿಕ್ಕುಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಚಾರ್ಡ್ ಲೈನ್, ಅಹ್ಮದ್ ನಗರ, ಕೋಪರ್ ಗಾಂವ್ , ಮನ್ಮಾಡ್ ಜಂ, ಭೂಸಾವಲ್ ಜಂ., ಹರ್ದಾ, ಇಟಾರ್ಸಿ ಜಂ., ರಾಣಿ ಕಮಲಾಪತಿ, ಬೀನಾ ಜಂ., ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ನಿಲ್ದಾಣ, ಗ್ವಾಲಿಯರ್ ಜಂ., ಆಗ್ರಾ ಕ್ಯಾಂಟ್, ಮಥುರಾ ಜಂ., ಹಜರತ್ ನಿಜಾಮುದ್ದೀನ್ ಜಂ., ಘಾಜಿಯಾಬಾದ್ ಜಂ., ಮೀರತ್ ಸಿಟಿ ಜಂ., ಮುಜಾಫರ್ ನಗರ, ಡಿಯೋಬಂದ್, ತಾಪ್ರಿ ಜಂ., ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಇರಲಿವೆ.
ಈ ವಿಶೇಷ ರೈಲಿನಲ್ಲಿ ೨ನೇ ದರ್ಜೆ ಹವಾನಿಯಂತ್ರಿತ-೧, ೩ನೇ ದರ್ಜೆ ಹವಾನಿಯಂತ್ರಿತ-೪, ಸ್ಲೀಪರ್ ಕ್ಲಾಸ್-೯, ಎಸ್‌ಎಲ್‌ಆರ್/ಡಿ ಮತ್ತು ಗಾರ್ಡ್ಸ್ ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರ್ ತಲಾ-೧ ಬೋಗಿಗಳು ಸೇರಿದಂತೆ ಒಟ್ಟು ೧೬ ಬೋಗಿಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.