ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದುಃಖದಲ್ಲಿರುವವರನ್ನು ಸಂತೈಸುವ ರೀತಿ

04:30 AM Jan 18, 2025 IST | Samyukta Karnataka

ಒಂದು ಘಟನೆಯಿಂದ ನೀವು ಬಾಧೆಗೊಳಗಾದಾಗ, ಅದು ದುರ್ಘಟನೆಯಾಗಿ ತೋರುತ್ತದೆ. ಕೆಲವು ಘಟನೆಗಳಿಗೆ ವಿವರಣೆ ಅಥವಾ ಲಾಜಿಕ್ ದೊರೆಯುವುದಿಲ್ಲ. ಅಪಘಾತಗಳು ಏಕೆ ಸಂಭವಿಸುತ್ತವೆ? ಪ್ರಕೃತಿಯ ವಿಕೋಪ ಏಕೆ ಉಂಟಾಗುತ್ತದೆ? ಜನರು ಏಕೆ ಸಾಯುತ್ತಾರೆ? ಇಂತಹ ಸಮಯಗಳಲ್ಲಿ ನನಗೆ ಮಾತ್ರ ಹೀಗೆ?' ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಎದ್ದರೆ, ಅವುಗಳು ಹೆಚ್ಚುವರಿಯಾಗಿ ದುಃಖವನ್ನುಂಟುಮಾಡುತ್ತವೆ. ಏಕೆ?' ಎನ್ನುವುದು ದುಃಖದೊಂದಿಗೆ ಸಂಬಂಧಿಸಿದೆ, ಆದರೆ ಹೇಗೆ?' ಎನ್ನುವುದು ಆಶ್ಚರ್ಯ ಮತ್ತು ಸಂತೋಷದೊಂದಿಗೆ ಸಂಬಂಧಿಸಿದೆ. ಒಂದು ವೇಳೆನನಗೆ ಮಾತ್ರ ಈ ತೊಂದರೆಯೇಕೆ?' ಎಂಬ ಪ್ರಶ್ನೆ ನಿಮ್ಮ ಅಥವಾ ಇತರರ ಮನಸ್ಸಿನಲ್ಲಿ ಎದ್ದರೆ, ಯಾವ ಉತ್ತರವೂ, ಯಾವುದೇ ವಿವರಣೆಯೂ ಸಾಕಾಗುವುದಿಲ್ಲ. ಈ ಸಮಯದಲ್ಲಿ ಸುಮ್ಮನಿ ರುವುದೇ ಶ್ರೇಯಸ್ಕರ. ಯಾವುದೇ ವಿವರಣೆ ಅಥವಾ ಸಿದ್ಧಾಂತಗಳು ಆ ಕ್ಷಣದಲ್ಲಿ ನೆರವಾಗುವುದಿಲ್ಲ.
ದುಃಖದಲ್ಲಿರುವವರನ್ನು ನೋಡಿದಾಗ, ಅವರನ್ನು ಸಂತೈಸಲು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಸಹಜ ಪ್ರವೃತ್ತಿ ಮುಂದಾಗುತ್ತದೆ. ಆದರೆ, ಈ ಸಂದರ್ಭಗಳಲ್ಲಿ ಒಂದು ಮುಗುಳ್ನಗು ಅಥವಾ ಕ್ಷಣಕಾಲದ ಮೌನವೇ ಉತ್ತಮ. ಯಾವ ವಿವರಣೆಗಳೂ, ಯಾವ ಸಿದ್ಧಾಂತಗಳೂ, ಯಾವ ದಾರ್ಶನಿಕತೆಯೂ ಅವರ ದುಃಖವನ್ನು ತಕ್ಷಣ ತೆಗೆಯಲು ಸಾಧ್ಯವಿಲ್ಲ.
ಬೆಥ್ಲೆಹೆಮ್ ಯೇಸುರವರ ಜನ್ಮಸ್ಥಳವಾಗಿದ್ದರೂ, ಅದು ನಿರಂತರ ಹಿಂಸಾಚಾರ, ರಕ್ತಪಾತವನ್ನು ಕಂಡಿದೆ. ಯೇಸುರವರ ಮೊದಲೂ, ಅವರ ನಂತರವೂ, ಆ ಸ್ಥಳದಲ್ಲಿ ಹಿಂಸಾಚಾರ ಮತ್ತು ನೋವು ಮುಂದುವರಿಯುತ್ತಲೇ ಇದ್ದು ಅದು ಯಾವತ್ತಿಗೂ ನಿಲ್ಲಲಿಲ್ಲ.
ಇಡೀ ಮಧ್ಯಕೊಲ್ಲಿ ಮತ್ತು ಈಜಿಪ್ಟ್ ನಿರಂತರವಾಗಿ ನೋವು ಅನುಭವಿಸಿದೆ. ಇಂತಹ ಸ್ಥಳಗಳಿಗೆ ಆಧ್ಯಾತ್ಮಿಕ ಜ್ಞಾನ ಅತ್ಯಗತ್ಯವಾಗಿದೆ. ಪ್ರಕೃತಿಯ ವಿಕೋಪದಲ್ಲಿ ಹಿರಿಯರು, ಕಿರಿಯರು, ಯುವಕರು ಎಲ್ಲರೂ ತೀವ್ರ ದುಃಖಕ್ಕೆ ಒಳಗಾಗುತ್ತಾರೆ. ಅಷ್ಟೊಂದು ನಷ್ಟ ಮತ್ತು ನೋವು ಏಕೆ ಎಂಬುದಕ್ಕೆ ಉತ್ತರವಿಲ್ಲ. ಈ ತೀವ್ರ ಕ್ಷಣಗಳಲ್ಲಿ ಬರುವ ಪ್ರಶ್ನೆಗಳನ್ನು ಮತ್ತು ಭಾವನೆಗಳನ್ನು ಆ ಸಮಯಕ್ಕೇ ಬಿಟ್ಟು, `ಅದರಿಂದ ಖಂಡಿತವಾಗಿ ದಾಟಿ ಹೋಗುತ್ತೇವೆ' ಎಂಬ ವಿಶ್ವಾಸ ಹೊಂದುವುದು ಮುಖ್ಯ.

Next Article