ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದುಬೈನಲ್ಲಿ ಅಪಘಾತ: ಬೆಳಗಾವಿಯ ಒಂದೇ ಕುಟುಂಬದ ನಾಲ್ವರು ಸಾವು

06:01 PM Aug 30, 2024 IST | Samyukta Karnataka

ಗೋಕಾಕ: ವಿಸಿಟಿಂಗ್ ವೀಸಾದ ಮೇಲೆ ದುಬೈಗೆ ತೆರಳಿದ್ದ ತಾಯಿ, ಮಗ ಹಾಗೂ ಮಗಳು, ಅಳಿಯ ಹೈಮಾಕ್ ಪ್ರದೇಶದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಸೋಮವಾರ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗೋಕಾಕ ನಿವಾಸಿಗಳಾದ ವಿಜಯಾ ಮಾಯಪ್ಪ ತಹಶೀಲ್ದಾರ(೫೨), ಪವನಕುಮಾರ ಮಾಯಪ್ಪ ತಹಶೀಲ್ದಾರ(೨೨), ಪೂಜಾ ಆದಿಶೇಷ ಉಪ್ಪಾರ(೨೧), ಆದಿಶೇಷ ಬಸವರಾಜ ಉಪ್ಪಾರ(೩೫) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಆದಿಶೇಷ ಹಾಗೂ ಪೂಜಾ ದಂಪತಿ ದುಬೈನ ಸಲಾಲಾನಲ್ಲಿ ನೆಲೆಸಿದ್ದರು. ಗರ್ಭಿಣಿ ಮಗಳನ್ನು ಸೀಮಂತ ಕಾರ್ಯಕ್ಕೆ ಕರೆತರಲು ದುಬೈಗೆ ತಾಯಿ, ಮಗ ವಿಸಿಟಿಂಗ್ ವೀಸಾದ ಮೇಲೆ ತೆರಳಿದ್ದರು. ಸೋಮವಾರ ರಾತ್ರಿ ೧೦ಗಂಟೆಗೆ ಇವರು ಕಾರ್‌ನಲ್ಲಿ ಸಾಲಾಲಾದಿಂದ ಮಸ್ಕತ್‌ಗೆ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ.
ಮೃತರ ಶರೀರವನ್ನು ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಗೆ ಸಂಬಂಧಿಸಿದ ಕ್ರಮಗಳು ಪ್ರಗತಿಯಲ್ಲಿವೆ ಎಂದು ತಿಳಿದು ಬಂದಿದೆ. ಗೋಕಾಕ ನಗರದಲ್ಲಿರುವ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಶಾಸಕ ರಮೇಶ ಜಾರಕಿಹೊಳಿ ಹಾಗೂ ಸಂಸದ ಜಗದೀಶ ಶೆಟ್ಟರ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ ಹಾಗೂ ಕೇಂದ್ರ ಸಚಿವರನ್ನು ಸಂಪರ್ಕಿಸಿ ಭಾರತೀಯ ರಾಯಭಾರ ಕಚೇರಿಯಿಂದ ಎಲ್ಲ ರೀತಿಯ ನೆರವು ನೀಡಲು ಮನವಿ ಮಾಡಿದ್ದಾರೆ.

Next Article