ದೂರದೃಷ್ಟಿಯ ನಾಯಕನನ್ನು ಅನುಸರಿಸಲು ಇದೇ ಸರಿಯಾದ ಸಮಯ
ಬೆಂಗಳೂರು: ಹಿಂದೂಗಳನ್ನು ಜಾತಿಗಳಿಂದ ವಿಭಜಿಸುವುದು ಕಾಂಗ್ರೆಸ್‌ನ ನೀತಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ದಿಟ್ಟ ಹೇಳಿಕೆಯು ಭಾರತವನ್ನು ಛಿದ್ರಗೊಳಿಸಿರುವ ವಸಾಹತುಶಾಹಿ, ವಿಭಜಕ ಮನಸ್ಥಿತಿಯ ಮೇಲೆ ನಿರ್ಮಿಸಲಾದ ಕಾಂಗ್ರೆಸ್ ತಂತ್ರಕ್ಕೆ ಕನ್ನಡಿ ಹಿಡಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮತಗಳನ್ನು ಭದ್ರಪಡಿಸಿಕೊಳ್ಳಲು ಇತರ ಸಮುದಾಯಗಳಲ್ಲಿ ಭಯವನ್ನು ಹುಟ್ಟುಹಾಕಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಅಪಾಯಕಾರಿ ಕಲೆಯನ್ನು ಕಾಂಗ್ರೆಸ್ ಕರಗತ ಮಾಡಿಕೊಂಡಿದೆ. ಅವರ ವಿಭಜನಾ ರಾಜಕೀಯವು ಅಶಾಂತಿಯ ಪರಂಪರೆಯನ್ನು ಸೃಷ್ಟಿಸಿದೆ. ಕಾಂಗ್ರೆಸ್‌ನ ವಿಭಾಜಕ ತಂತ್ರಗಳನ್ನು ಯಶಸ್ವಿಯಾಗಲು ಬಿಟ್ಟರೆ, ನಾವು ತಲೆಮಾರುಗಳವರೆಗೆ ಭಾರತದ ಭವಿಷ್ಯವನ್ನು ಕುಂಠಿತ ಮಾಡಿದಂತೆ. ಭಾರತವು ಮತ್ತೆ ಈ ಬಲೆಗೆ ಬೀಳದಂತೆ ನೋಡಿಕೊಳ್ಳಲು ಮೌನ ಮುರಿದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತಹ ಬಲಿಷ್ಠ ಮತ್ತು ದೂರದೃಷ್ಟಿಯ ನಾಯಕನನ್ನು ಅನುಸರಿಸಲು ಇದೇ ಸರಿಯಾದ ಸಮಯ ಎಂದಿದ್ದಾರೆ.