ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೆಹಲಿ, ಜಾರ್ಖಂಡ್‌ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಅವರನ್ನೂ ಸಹ ಬಂಧಿಸಲು ಸಂಚು

11:20 AM Jul 23, 2024 IST | Samyukta Karnataka

ಬೆಂಗಳೂರು: ದೆಹಲಿ, ಜಾರ್ಖಂಡ್‌ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಅವರನ್ನೂ ಸಹ ಬಂಧಿಸಲು ಸಂಚು ನಡೆಸಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೈನ್ ಅವರನ್ನು ರಾಜಕೀಯ ದ್ವೇಷದ ಕಾರಣಕ್ಕೆ ಬಂಧಿಸಿದ ಹಾಗೆ ಸಿದ್ದರಾಮಯ್ಯ ಅವರನ್ನೂ ಸಹ ಬಂಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು ಇದಕ್ಕಾಗಿ ತನ್ನ ಇ.ಡಿ ಸಂಸ್ಥೆಯನ್ನು ಬಳಸಿಕೊಳ್ಳುವಂತಹ ಅಸಂವಿಧಾನಿಕ ಕೆಲಸವನ್ನು ಮಾಡುತ್ತಿದೆ.
ಕರ್ನಾಟಕದಲ್ಲಿ ಪ್ರಣಾಳಿಕೆಗಳನ್ನು ನೀಡಿ, ಅದಕ್ಕೆ ತಕ್ಕದಾಗಿ ನುಡಿದಂತೆ ನಡೆಯುವ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.
ವೈಯಕ್ತಿಕ ಹಿತಾಸಕ್ತಿಗಳೇ ವಿಜೃಂಭಿಸುತ್ತಾ, ಸರ್ಕಾರ ಎಂದರೆ ಯಾರೋ ಕೆಲವರಿಗೆ ಇರುವ ಅನುಕೂಲದ ವ್ಯವಸ್ಥೆ ಎಂಬಂತಾಗಿರುವ ಕಾಲದಲ್ಲಿ ಸರ್ಕಾರ ಎಂದರೆ ಜನರಿಗಾಗಿ ಇರುವ ವ್ಯವಸ್ಥೆ ಎಂದು ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ED ಮೂಲಕ ಸಂಚು ಮಾಡುತ್ತಿರುವ ಕೇಂದ್ರ ಸರ್ಕಾರದ್ದು ಹೇಡಿಗಳ ನಡೆ.
ಇಂತಹ ಕುತಂತ್ರಗಳಿಂದ ಕೇಂದ್ರ ಸರ್ಕಾರವು ರಾಜ್ಯ ಜನರ ವಿರೋಧ ಎದುರಿಸುತ್ತದೆಯೇ ವಿನಃ, ಅದರಿಂದ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಅಷ್ಟಕ್ಕೂ ದೊಡ್ಡ ಜನಬೆಂಬಲದ ಸಹಕಾರದಿಂದ ಮುಖ್ಯಮಂತ್ರಿಯಾಗಿ ಜನಪರವಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅಂತಹ ಜನಪ್ರಿಯ ಮುಖ್ಯಮಂತ್ರಿಯನ್ನು ED ದುರ್ಬಳಕೆ ಸಂಚಿನಿಂದ ಬಂಧಿಸುವ ಹುನ್ನಾರವನ್ನು ಸಹಿಸಲಾದೀತೇ? ಜನವಿರೋಧಿಗಳಾದ ಈ ಭ್ರಷ್ಟ ಬಿಜೆಪಿಯವರಿಗೇ ಇಷ್ಟೊಂದು ಧೈರ್ಯ, ಭಂಡತನ ಇರಬೇಕಾದರೆ, ಜನಪರವಾಗಿ ಚಿಂತಿಸಿ ಅವರ ಬದುಕಿಗೆ ನೇರವಾಗಿ ಸಹಾಯ ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿರುವ ನಮಗೆ ಇನ್ನೆಷ್ಟು ಧೈರ್ಯ ವಿಶ್ವಾಸ ಇರಬೇಡ, ಅಲ್ಲವೇ? ಎಂದಿದ್ದಾರೆ.

Next Article