ದೇಣಿಗೆ ಕೊಟ್ಟು ಅನುಭವ ಮಂಟಪವನ್ನೇ ಅತಿಕ್ರಮಿಸಿದ್ದಾರೆ…
ಪಹಣಿಯಲ್ಲಿ ರೈತರ ಹೆಸರು ಬದಲಿಸಿ ರಾತ್ರೋರಾತ್ರಿ ವಕ್ಫ್ ಇಂಡೀಕರಣವಾದಾಗ ಇವರು ಎಲ್ಲಿದ್ದರು ? ಖೊಟ್ಟಿ ಜಾತ್ಯತೀತತೆಯನ್ನು ಬಿಟ್ಟು ದೇಶಕ್ಕೆ ಮಾರಕವಾಗಿರುವ ವಕ್ಫ್ ವಿರುದ್ಧ ಇವರು ಮಾತನಾಡಲಿ.
ಬೆಂಗಳೂರು: ಮಠ, ಮಾನ್ಯಗಳು ವಕ್ಫ್ ನದ್ದು ಎಂದಾಗ ಇವರ ಧೀರತ್ವ, ಶೂರತ್ವ ಎಲ್ಲಿ ಅಡಗಿತ್ತು? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಬಾಗಲಕೋಟೆ ಜಿಲ್ಲೆಯ, ತೇರದಾಳದಲ್ಲಿ ಅಲ್ಲಮ ಪ್ರಭು ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ವಕ್ಫ್ ಕುರಿತು ಮಾತನಾಡುವಾಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ತಕಾರರು ವ್ಯಕ್ತಪಡಿಸಿ ತಮ್ಮ ಖೊಟ್ಟಿ ಜಾತ್ಯಾತೀತತೆಯನ್ನು ಪ್ರದರ್ಶಿಸಿದರು. ರಾಜ್ಯದಾದ್ಯಂತ ವಕ್ಫ್ ನ ನಿರಂಕುಶ, ಅಸಂವಿಧಾನಿಕ ನಡೆಯಿಂದ ರೈತರು ಬೇಸತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾವು ಅಹರ್ನಿಶಿ ಟೊಂಕಕಟ್ಟಿ ಕೆಲಸ ಮಾಡುತ್ತಿದ್ದರೆ, ಇದರ ಅರಿವೇ ಇಲ್ಲದಿರುವುದು ನಿಜಕ್ಕೂ ಖೇದನೀಯ.
ಮಠ, ಮಂದಿರಕ್ಕೆ ಮುಸಲ್ಮಾನರಿಂದ ದೇಣಿಗೆ ಪಡೆಯುವುದರಿಂದ ವಕ್ಫ್ ನ ಅನ್ಯಾಯ, ಅಕ್ರಮ, ಅಕೃತ್ಯ, ಅನಿಷ್ಟಗಳು ಕೊನೆಯಾಗುವುದಿಲ್ಲವೆಂದು ಮೊದಲು ಅರಿಯಬೇಕು. ಒಂದೆರೆಡು ಲಕ್ಷ ದೇಣಿಗೆ ಕೊಟ್ಟಿರುವ ಇವರು ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪವನ್ನೇ ಅತಿಕ್ರಮಿಸಿದ್ದಾರೆ ಎಂಬುದು ಇವರಿಗೆ ಮನವರಿಕೆಯಾಗಲಿ
ಮಠ, ಮಾನ್ಯಗಳು ವಕ್ಫ್ ನದ್ದು ಎಂದಾಗ ಇವರ ಧೀರತ್ವ, ಶೂರತ್ವ ಎಲ್ಲಿ ಅಡಗಿತ್ತು? ಪಹಣಿಯಲ್ಲಿ ರೈತರ ಹೆಸರು ಬದಲಿಸಿ ರಾತ್ರೋರಾತ್ರಿ ವಕ್ಫ್ ಇಂಡೀಕರಣವಾದಾಗ ಇವರು ಎಲ್ಲಿದ್ದರು? ಖೊಟ್ಟಿ ಜಾತ್ಯತೀತತೆಯನ್ನು ಬಿಟ್ಟು ದೇಶಕ್ಕೆ ಮಾರಕವಾಗಿರುವ ವಕ್ಫ್ ವಿರುದ್ಧ ಇವರು ಮಾತನಾಡಲಿ.
ಒಂದೆರೆಡು ಸಾವಿರ ರೂಪಾಯಿ ಆಸೆಗೆ, ಸಾವಿರಾರು ವರ್ಷಗಳಿಂದ ಅನ್ನ ನೀಡುತ್ತಿರುವ ಹೊಲ ಗದ್ದೆಗಳನ್ನು ಕಳೆದುಕೊಳ್ಳುವವರೆಗೂ ಇವರಿಗೆ ತಮ್ಮ ಖೊಟ್ಟಿ ಜಾತ್ಯಾತೀತಯೆ ಅರಿವು ಆಗುವುದಿಲ್ಲ. ಇವರಿಗೆ ತಾಯಿ ಸವದತ್ತಿ ಯಲ್ಲಮ್ಮ ಸದ್ಬುದ್ದಿಯನ್ನು ನೀಡಲಿ ಎಂದಿದ್ದಾರೆ.