For the best experience, open
https://m.samyuktakarnataka.in
on your mobile browser.

ದೇವನಿಲ್ಲವೆಂಬ ನಿರೀಶ್ವರವಾದವೇ ಬ್ರಹ್ಮಹತ್ಯೆ

04:00 AM Nov 06, 2024 IST | Samyukta Karnataka
ದೇವನಿಲ್ಲವೆಂಬ ನಿರೀಶ್ವರವಾದವೇ ಬ್ರಹ್ಮಹತ್ಯೆ

ಬ್ರಹ್ಮಹತ್ಯೆ ಎಂದರೇನು? ಬ್ರಹ್ಮ ಅಂದ್ರೆ ಪರಮಾತ್ಮ, ಬ್ರಹ್ಮಣ್ಯ. ಅಂದ್ರೆ ಪರಮಾತ್ಮ. ಆ ಪರಮಾತ್ಮ ಇಲ್ಲ ಎಂದು ಚಿಂತನೆ ಮಾಡುವುದು ನಾಸ್ತಿಕತ್ವ. ಪರಬ್ರಹ್ಮವನ್ನು ತಿಳಿದ ಬ್ರಾಹ್ಮಣನ ಹನನ ಮಾಡುವುದು ಬ್ರಹ್ಮಹತ್ಯೆ.
ಪರಬ್ರಹ್ಮನನ್ನು ತಿಳಿದವನೇ ಬ್ರಾಹ್ಮಣ. ಹಾಗೆಯೇ ಪಶುವಾದ ಪರಮಾತ್ಮನನ್ನು ಇಲ್ಲ ಎಂದು ಚಿಂತನೆ ಮಾಡುವುದೇ ಪಶುಹತ್ಯೆ. ಅಂತಹ ನಾಸ್ತಿಕರಿಗೆ ಭಗವಂತನ ಕಥೆ ರುಚಿಸುವದೇ ಇಲ್ಲ.
ಭಗವಂತ ನಮ್ಮನ್ನು ಪಾಲನೆ ಮಾಡುತ್ತಾನೆ. ಸುಖರೂಪನಾಗಿದ್ದಾನೆ, ನಮಗೂ ಸುಖವನ್ನು ಕೊಡುತ್ತಾನೆ. ಅಂತಹ ದೇವರನ್ನು ಆಸ್ತಿಕರು ಇಲ್ಲ ಎಂದು ಹೇಳುತ್ತಾರೆ. ಎಂತಹ ಮೂಢರು ಎಂದು ಅದರಲ್ಲಿ ಸೂಚನೆ.
ಬರೀ ಸುಖವನ್ನು ಮಾತ್ರ ಕೊಡದೆ ದುಃಖವನ್ನೂ ಕಳೆಯುತ್ತಾನೆ. ಯಾವ ಪರಮಾತ್ಮನ ಅನುಗ್ರಹದಿಂದ ನಮ್ಮೆಲ್ಲರ ಶೋಕ ದೂರವಾಗುತ್ತದೆ, ಸಂಸಾರ ದೂರವಾಗುತ್ತದೆ, ಅಷ್ಟು ದೊಡ್ಡ ಅನುಗ್ರಹ ಮಾಡಿ ನಮ್ಮ ಕಷ್ಟವನ್ನು ಕಳೆಯುವ ಪರಮಾತ್ಮನನ್ನು ಕೂಡ ಅಲ್ಲಗಳೆಯುತ್ತಾರೆ. ಅವನೇ ಇಲ್ಲ ಅಂತಾರೆ. ಅವನೇ ಇಲ್ಲ ಅನ್ನಬೇಕಾಗಿಲ್ಲ. ಸ್ಮೃತಿ, ಶ್ರುತಿಗಳಲ್ಲಿ ಅವನ ಜಾಗರೂಕರಾಗಿ ಆಜ್ಞೆಯುಂಟು. ಆದರೂ ಅದನ್ನೇನು ನಾನು ಪರಿಪಾಲನೆ ಮಾಡುವುದಿಲ್ಲ ಎಂಬ ದುರಹಂಕಾರಿಗಳು ಇದ್ದಾರೆ. ಅವರು ಪಶುಹತ್ಯೆ ಮಾಡಿದವರು.
ಒಬ್ಬ ರಾಜನನ್ನು ಕೊಲೆ ಮಾಡುವುದು ಎಂದರೆ ಆಯುಧವನ್ನು ತೆಗೆದುಕೊಂಡು ಕೊಲೆ ಮಾಡುವುದಲ್ಲ. ಆ ರಾಜ ಹೊರಡಿಸಿದ ಆಜ್ಞೆಯನ್ನು ಉಲ್ಲಂಘನೆ ಮಾಡಿದರೂ ರಾಜನ ಕೊಲೆ ಮಾಡಿದಂತೆ.
ಸಾಮಾನ್ಯ ರಾಜರ ಆಜ್ಞೆಯನ್ನು ಉಲ್ಲಂಘನೆ ಮಾಡಿದರೆ ರಾಜರ ಕೊಲೆ. ಒಬ್ಬ ಬ್ರಾಹ್ಮಣನ ಮರ್ಯಾದೆ ತೆಗೆದರೆ ಒಬ್ಬ ಬ್ರಹ್ಮಜ್ಞಾನಿಯಾದ ಬ್ರಾಹ್ಮಣನ ಕೊಲೆ. ಇಡೀ ಜಗತ್ತಿಗೆ ರಾಜಾಧಿರಾಜ, ರಾಜೇಶ್ವರ, ಅಂತಹ ಸಕಲ ರಾಜರುಗಳಲ್ಲಿ-ಚಕ್ರವರ್ತಿಗಳಲ್ಲಿ ಅಂತರ್ಯಾಮಿಯಾಗಿ, ಮಹಾರಾಜೇಶ್ವರನಾದ, ಮಹೇಶ್ವರನಾದ ಆ ಭಾಗ್ಯವಂತನ ಆಜ್ಞೆಯ ಪರಿಪಾಲನೆ ಮಾಡದೆ ಉಲ್ಲಂಘನೆ ಮಾಡಿದರೆ ಆದಂತಹ ದೊಡ್ಡ ಹತ್ಯೆ ಮಾಡಿದ ಪಾಪ ಬರುತ್ತದೆ ನಮಗೆ. ಆ ವಿಷಯದಲ್ಲಿ ಅಪಶುಕ್ನತ.
ಅಂತಹ ಪರಮಾತ್ಮನನ್ನೇ ನಾವು ಹತ್ಯೆ ಮಾಡಲು ಹೊರಡುತ್ತೇವೆ. ಎಂಥ ವಿಪರ್ಯಾಸ? ನಮ್ಮ ಶೋಕಗಳನ್ನು ಕಳೆಯಲು ಅವನಿದ್ದಾನೆ. ನಮಗೆ ಸೂತಕ ಕೊಡಲು ಅವನಿದ್ದಾನೆ. ಆದರೆ ನಾವು ಮಾತ್ರ ಆ ಪರಮಾತ್ಮನ ಆಜ್ಞೆಯನ್ನು ಉಲ್ಲಂಘನೆ ಮಾಡಿ ಅವನ ಹತ್ಯೆ ಮಾಡುವಂತಹ ಕೃತಘ್ನರಾದ ಮೇಲೆ, ಆಗ ದೇವರ ಕಥೆ ಹಿಡಿಸುವುದಿಲ್ಲ. ಅಂತಹವರನ್ನು ಬಿಟ್ಟರೆ ಉಳಿದವರೆಲ್ಲರೂ ಸಜ್ಜನರು. ಭಗವಂತನ ಆಜ್ಞೆಯನ್ನು ಪರಿಪಾಲನೆ ಮಾಡುವವರು, ಶಾಸ್ತ್ರೋಕ್ತವಾದ ವಿಹಿತ ಕರ್ಮಗಳನ್ನು ಅನುಷ್ಠಾನ ಮಾಡುವವರು ಯಾರಿದ್ದಾರಲ್ಲ, ಅವರಿಗೆಂದೂ ಶಾಸ್ತ್ರದಲ್ಲಿ ವೈರಾಗ್ಯ ಬರುವುದಿಲ್ಲ.
ಅವನು ದೇವರು ಹೇಳಿದಂತೆ ವರ್ತನೆ ಮಾಡುತ್ತಾನೆ, ಸತ್ಕರ್ಮಗಳನ್ನು ಮಾಡುತ್ತಾನೆ, ಜ್ಞಾನಗಳಲ್ಲಿ ಆಸಕ್ತಿ ಇರುತ್ತದೆ. ಅವನಿಗೆ ಶಾಸ್ತ್ರದಲ್ಲಿ ಬೆಳಗ್ಗೆ ಬರುತ್ತದೆ. ಎಲ್ಲಾ ಆಶಯಗಳನ್ನು ಬಿಟ್ಟವರು ಭಗವಂತನ ಗುಣವರ್ಣನೆಗಳನ್ನು ಮಾಡುತ್ತಾರೆ.