ದೇಶದಲ್ಲಿ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಉದ್ದೇಶ ಕಾಂಗ್ರೆಸ್‌ನದ್ದು
- ನವದೆಹಲಿ: ಭಾರತದಲ್ಲೂ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಮನಸ್ಥಿತಿ, ಸ್ಪಷ್ಟ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮುಖಂಡ ಐವಾನ್ ಡಿಸೋಜ ಅವರ ಹೇಳಿಕೆ ಅರಾಜಕತೆ ಸೃಷ್ಟಿಯನ್ನು ಪುಷ್ಟೀಕರಿಸುತ್ತಿದೆ ಎಂದು ವ್ಯಾಖ್ಯಾನಿಸಿ ಸಚಿವ ಜೋಶಿ ಟ್ವೀಟ್ ಮಾಡಿದ್ದಾರೆ.
ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ ಈ ರೀತಿ ಅರಾಜಕತೆಯ ಮಾತುಗಳನ್ನಾಡುವುದು ಅಕ್ಷಮ್ಯ ಮತ್ತು ಅತ್ಯಂತ ಖಂಡನೀಯ ಎಂದು ಸಚಿವರು ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್ ನ ನಡೆ ನೋಡಿದರೆ ಬಾಂಗ್ಲಾ ದೇಶದಂತಹ ಅರಾಜಕತೆ ಸೃಷ್ಟಿಸುವ ರೀತಿ ರ‍್ತಿಸುತ್ತಿರುವಂತಿದೆ ಎಂದು ಆರೋಪಿಸಿದ್ದಾರೆ.
ಸಂವಿಧಾನ ದತ್ತವಾಗಿರುವ ರಾಜ್ಯಪಾಲರ ಸ್ಥಾನಕ್ಕೆ ಘನತೆ-ಗೌರವ ತೋರುವ ಬದಲು ಅದಕ್ಕೆ ಧಕ್ಕೆ ತರುವ ರೀತಿ ಕಾಂಗ್ರೆಸ್ ರ‍್ತಿಸುತ್ತಿದೆ. ರಾಜಭವನ ಮತ್ತು ರಾಜ್ಯಪಾಲರ ಗೃಹಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿರುವುದು ನಿಜಕ್ಕೂ ಆಡಳಿತಾರೂಢ ರ‍್ಕಾರದ ರ‍್ವಾಧಿಕಾರಿ ಧೋರಣೆ ಎನ್ನುವಂತಿದೆ ಎಂದು ಜೋಶಿ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಪಾಲರ ಹುದ್ದೆ ಘನತೆಯ ಅರಿವೆ ಇಲ್ಲ. ಸಂವಿಧಾನದ ಹತ್ಯೆ ಮಾಡಿ ದೇಶದಲ್ಲಿ ಎರ‍್ಜೆನ್ಸಿ ಹೇರಿ ಜನಜೀವನ ಅಸ್ತವ್ಯಸ್ಥಗೊಳಿಸಿದ್ದ ಕಾಂಗ್ರೆಸ್ ಪಕ್ಷ ಇನ್ನೂ ಅದೇ ರ‍್ತನೆ, ಮನಸ್ಥಿತಿಯಲ್ಲಿದೆ. ಅದನ್ನಿನ್ನೂ ತಿದ್ದಿಕೊಂಡಿಲ್ಲ ಎಂದು ಆರೋಪಿಸಿರುವ ಸಚಿವ ಪ್ರಲ್ಹಾದ ಜೋಶಿ, ಇದಕ್ಕೆ ಜನರೇ ತಕ್ಕ ಪಾಠವ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.