For the best experience, open
https://m.samyuktakarnataka.in
on your mobile browser.

ದ್ವಾರಕೆಯಲ್ಲಿ ಸ್ಕೂಬಾ ಡೈವಿಂಗ್

01:00 AM Feb 26, 2024 IST | Samyukta Karnataka
ದ್ವಾರಕೆಯಲ್ಲಿ ಸ್ಕೂಬಾ ಡೈವಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಅರಬ್ಬಿ ಸಮುದ್ರದ ಪಂಚಕುಲ ವಿಹಾರ ತಾಣದಲ್ಲಿ ಭಾನುವಾರ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದ ಆಳಕ್ಕೆ ಇಳಿದರು. ನೀರಿನಲ್ಲಿ ಮುಳುಗಿರುವ ಪುರಾತನ ತಾಣವಾದ ದ್ವಾರಕೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ದೈವಿಕ ಅನಂದವನ್ನೂ ಅನುಭವಿಸಿದರು.
ಇದಕ್ಕೂ ಮೊದಲು ಅವರು ದ್ವಾರಕಾದ ಶ್ರೀಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅತಿದೊಡ್ಡ ಕೇಬಲ್ ಸೇತುಗೆ ಚಾಲನೆ ಇದೇ ವೇಳೆ, ದೇಶದ ಅತಿದೊಡ್ಡ ಕೇಬಲ್ ಸೇತುವೆಗೂ ಪ್ರಧಾನಿ ಮೋದಿ ಚಾಲನೆ ನೀಡಿದರು. ಒಖಾ ಹಾಗೂ ಬೇಟ್ ದ್ವಾರಕಾ ದ್ವೀಪಗಳನ್ನು ಸಂಪರ್ಕಿಸುವ, ೨.೩ ಕಿ.ಮೀ ದೂರದ ಈ ಸುದರ್ಶನ ಸೇತು ಹಳೆಯ ಹಾಗೂ ಹೊಸ ದ್ವಾರಕಾ ಮಧ್ಯೆ ಸಂಪರ್ಕ ಕಲ್ಪಿಸಲಿದೆ ಎಂದು ಮೋದಿ ಹೇಳಿದರು.
೫ ಏಮ್ಸ್ಗಳಿಗೆ ಚಾಲನೆ: ರಾಜ್‌ಕೋಟ್‌ನಲ್ಲಿ ಭಾರಿ ರೋಡ್ ಶೋ ಮಾಡಿದ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೪೮,೧೦೦ ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಹಾಗೆಯೇ ಇದೇ ನಗರದಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾತ್ರವಲ್ಲದೆ, ಪಶ್ಚಿಮಬಂಗಾಳದ ಕಲ್ಯಾಣಿ, ಉತ್ತರಪ್ರದೇಶದ ಮಂಗಳಗಿರಿ ಹಾಗೂ ರಾಯಬರೇಲಿ ಹಾಗೂ ಪಂಜಾಬಿನ ಬಟಿಂಡಾದಲ್ಲಿನಿರ್ಮಿಸಲಾಗಿರುವ ಏಮ್ಸ್ ಸಂಸ್ಥೆಗಳನ್ನೂ ದೇಶಕ್ಕೆ ಸಮರ್ಪಿಸಿದರು.
ಒಂದು ಕಾಲದಲ್ಲಿ ದೆಹಲಿಯಲ್ಲಿ ಮಾತ್ರ ದೇಶದ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈಗ ದೇಶದ ಮೂಲೆಮೂಲೆಗಳಲ್ಲೂ ಅಂತಹ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ರಾಯಬರೇಲಿಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿದರೆ ನಾನು ಅಲ್ಲಿ ಏಮ್ಸ್ ನಿರ್ಮಿಸಿದೆ ಎಂದವರು ಹೇಳಿಕೊಂಡರು.